nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ

    March 13, 2026

    ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ

    March 13, 2026

    ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ

    March 12, 2026
    Facebook Twitter Instagram
    ಟ್ರೆಂಡಿಂಗ್
    • ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ
    • ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ
    • ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ
    • ಅಧಿವೇಶನಕ್ಕೆ ಗೈರಾಗುವ ಸಚಿವರನ್ನು ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ
    • ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ತುಮಕೂರಿನಲ್ಲಿ ಆರೋಪಿ ಬಂಧನ
    • ತುಮಕೂರು: ಅಂಗನವಾಡಿ ಹುದ್ದೆಗಳ ನೇಮಕಾತಿ; 2,628 ಅರ್ಜಿಗಳು ತಿರಸ್ಕೃತ
    • ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯ: ತಿಪಟೂರಿನಲ್ಲಿ ಪ್ರತಿಭಟನೆ
    • ಮಧುಗಿರಿ: ಒಳ ಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ
    ತುಮಕೂರು March 13, 2026

    ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ

    By adminMarch 13, 2026No Comments2 Mins Read
    tumakur police

    ತುಮಕೂರು: ವೃದ್ಧೆಯನ್ನು ಕೊಲೆ ಮಾಡಿ, ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ದೂರು ದಾಖಲಾದ 24 ತಾಸಿನೊಳಗೆ ಕುಣಿಗಲ್ ಉಪವಿಭಾಗದ ಪೊಲೀಸರು ಸೆರೆಹಿಡಿದಿದ್ದಾರೆ.

    ಎಸ್ಪಿ ಕೆ.ವಿ.ಅಶೋಕ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ಈ ಪ್ರಕರಣದ ಆರೋಪಿಯನ್ನು ಘಟನೆ ನಡೆದು 24 ಗಂಟೆಗಳೊಳಗೆ ಬಂಧಿಸಿರುವುದಾಗಿ ಅವರು ತಿಳಿಸಿದರು.


    Provided by
    Provided by

    ಮುತ್ತುರಾಜ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸವಿದ್ದ ನಾಗಮ್ಮ ಎಂಬುವರ ಬಳಿ ಸಾಲ ಪಡೆದಿದ್ದ. ಸಾಲದ ಹಣ ತೀರಿಸುವಂತೆ ವೃದ್ಧೆ ನಾಗಮ್ಮ ಅವರು ಕೇಳುತ್ತಿದ್ದರಿಂದ ಹತ್ಯೆಗೆ ಸ್ಕೆಚ್ ಹಾಕಿ ಮಾ.9ರಂದು ರಾತ್ರಿ 7.30 ರಿಂದ 8ರ ಸಮಯದಲ್ಲಿ ಮನೆಗೆ ನುಗ್ಗಿ ವೃದ್ಧೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ಆಕೆ ಧರಿಸಿದ್ದ ಚಿನ್ನದ ಮಾಂಗಲ್ಯ ಸರ ಒಂದು ಜೊತೆ ಓಲೆ ಹಾಗೂ ನಾಲ್ಕು ಚಿನ್ನದ ಬಳೆಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದನು.

    ಘಟನೆಯ ನಂತರ ಬೆಂಗಳೂರಿನಲ್ಲಿದ್ದ ಮೃತ ನಾಗಮ್ಮ ಅವರ ಪುತ್ರ ವರದರಾಜು ಅವರು ಮಾ.11ರಂದು ಹುಲಿಯೂರುದುರ್ಗ ಠಾಣೆಗೆ ನೀಡಿದ್ದರು. ಈ ದೂರನ್ನಾಧರಿಸಿ ಅಪರಾಧ ಪತ್ತೆ ತಂಡವನ್ನು ರಚಿಸಲಾಯಿತು. ದೂರು ನೀಡಿದ 24 ತಾಸಿನೊಳಗೆ ಆರೋಪಿಯನ್ನು ತನಿಖಾ ತಂಡ ಪತ್ತೆ ಹಚ್ಚಿ ಸೆರೆ ಹಿಡಿದಿದೆ.

    ಬಂಧಿತ ಆರೋಪಿಯಿಂದ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಸೇರಿದಂತೆ ವೃದ್ಧೆಯಿಂದ ಕಸಿದುಕೊಂಡಿದ್ದ ನಾಲ್ಕು ಚಿನ್ನದ ಬಳೆ, ಮಾಂಗಲ್ಯ ಸರ, ಓಲೆ ಸೇರಿ 79 ಗ್ರಾಂ ತೂಕದ 11 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.

    ಇನ್ನೂ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯಾಚರಣೆಗೆ  ಎಸ್ಪಿ ಕೆ.ವಿ.ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.  ತನಿಖಾ ತಂಡದಲ್ಲಿ ಎಎಸ್ಪಿಗಳಾದ ಸಿ.ಗೋಪಾಲ್, ಎಂ.ಎಲ್. ಪುರುಷೋತ್ತಮ್ ನೇತೃತ್ವದಲ್ಲಿ ಕುಣಿಗಲ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಓಂಪ್ರಕಾಶ್ ಮಾರ್ಗದರ್ಶನದ ಮೇರೆಗೆ ಅಮೃತೂರು ವೃತ್ತ ನಿರೀಕ್ಷಕ ನವೀನ್ ಗೌಡ, ಕುಣಿಗಲ್, ಹುಲಿಯೂರುದುರ್ಗ ಪಿಎಸ್ ಐಗಳಾದ ಮಾದಾನಾಯ್ಕ, ಪ್ರಶಾಂತ್ ಟಿ.ಎಸ್. ಎಎಸ್ ಐ ಗಂಗರಾಜು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ತನಿಖಾ ತಂಡದ ಪೊಲೀಸರು ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ

    March 13, 2026

    ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ತುಮಕೂರಿನಲ್ಲಿ ಆರೋಪಿ ಬಂಧನ

    March 12, 2026

    ತುಮಕೂರು: ಅಂಗನವಾಡಿ ಹುದ್ದೆಗಳ ನೇಮಕಾತಿ; 2,628 ಅರ್ಜಿಗಳು ತಿರಸ್ಕೃತ

    March 12, 2026

    Leave A Reply Cancel Reply

    Our Picks

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ

    March 13, 2026

    ತುಮಕೂರು: ವೃದ್ಧೆಯನ್ನು ಕೊಲೆ ಮಾಡಿ, ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ದೂರು ದಾಖಲಾದ 24 ತಾಸಿನೊಳಗೆ ಕುಣಿಗಲ್ ಉಪವಿಭಾಗದ ಪೊಲೀಸರು ಸೆರೆಹಿಡಿದಿದ್ದಾರೆ.…

    ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ

    March 13, 2026

    ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ

    March 12, 2026

    ಅಧಿವೇಶನಕ್ಕೆ ಗೈರಾಗುವ ಸಚಿವರನ್ನು ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ

    March 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.