ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ವೇದಾಂತ್ ದುಗಾರ್ ನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರ್. ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ದರ್ಶನ್ ಮೇಲೆ ಮೇ 9ರಂದು ಹಲ್ಲೆ ನಡೆದಿತ್ತು. ನಂತರ ನಾಪತ್ತೆಯಾಗಿದ್ದ ವೇದಾಂತ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಮಾಹಿತಿ ಆಧರಿಸಿ ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಆರೋಪಿ ವೇದಾಂತ್, ವಿಎಆರ್ ಬಿಲ್ಡರ್ಸ್ ಮಾಲೀಕ ಸಂಜಯ್ ಅವರ ಪುತ್ರ. ಈತ ಹಾಗೂ ದರ್ಶನ್ ಹಲವು ವರ್ಷಗಳ ಸ್ನೇಹಿತರು. ಮದುವೆಯೊಂದಕ್ಕೆ ಇಬ್ಬರೂ ಪ್ರತ್ಯೇಕವಾಗಿ ಹೋಗಿದ್ದರು. ‘ತನ್ನನ್ನು ಹೆಚ್ಚು ಮಾತನಾಡಿಸಲಿಲ್ಲ ಎಂದು ಜಗಳ ತೆಗೆದಿದ್ದ ಆರೋಪಿ ಮದ್ಯದ ಬಾಟಲಿಯಿಂದ ದರ್ಶನ್ ತಲೆಗೆ ಹೊಡೆದಿದ್ದ’ ಎಂದು ತಿಳಿಸಿದ್ದಾರೆ.
ವೇದಾಂತ್ ಸಂಬಂಧಿಕರು ನೇಪಾಳದಲ್ಲಿದ್ದಾರೆ. ಕೃತ್ಯದ ಬಳಿಕ ಆತ ನೇಪಾಳಕ್ಕೆ ಹೋಗಿದ್ದ. ಆತ ಬೆಂಗಳೂರಿಗೆ ವಾಪಸು ಬರುತ್ತಿದ್ದಂತೆ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


