ಬೆಂಗಳೂರು: ಹಣವನ್ನು ಠೇವಣಿ ಇರಿಸಿಕೊಂಡು ವಾಪಸು ನೀಡದೇ ವಂಚಿಸಿದ್ದ ಆರೋಪದಡಿ ‘ನಿಷ್ಕಾ ವಿವಿಧೋದ್ದೇಶ ಸೌಹಾರ್ದ ಕೋ-ಆಪರೇಟಿವ್ ನಿಯಮಿತ’ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ನಿರ್ದೇಶಕರ ಆಸ್ತಿಗಳ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.
ಶ್ರೀನಿವಾಸನಗರದಲ್ಲಿ ಮುಖ್ಯ ಕಚೇರಿ ಹೊಂದಿದ್ದ ಸಂಸ್ಥೆಯಲ್ಲಿ ಬೆಂಗಳೂರು ಹಾಗೂ ರಾಜ್ಯದ ಹಲವು ನಗರಗಳ ಜನರು ಹಣ ಹೂಡಿಕೆ ಮಾಡಿದ್ದರು. ಆದರೆ, ನಿಗದಿತ ಸಮಯಕ್ಕೆ ಹೂಡಿಕೆದಾರರಿಗೆ ಹಣ ವಾಪಸು ನೀಡಿರಲಿಲ್ಲ.


