ಉತ್ತರ ಪ್ರದೇಶದ ಬಂದಾ ಎಂಬಲ್ಲಿ ದಲಿತ ಮಹಿಳೆಯ ಅತ್ಯಾಚಾರ ಮಾಡಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ದಲಿತ ಮಹಿಳೆ (40) ರಾಜ್ ಕುಮಾರ್ ಶುಕ್ಲಾ ಎಂಬುವರ ಮನೆಗೆ ಹಿಟ್ಟಿನ ಗಿರಣಿಯನ್ನು ಸ್ವಚ್ಛಗೊಳಿಸಲು ಹೋಗಿದ್ದರು.
ಮನೆಗೆ ಬಾರದೆ ಇದ್ದಾಗ ಸಂತ್ರಸ್ತೆಯ ಮಗಳು ಅಲ್ಲಿಗೆ ಹೋದ ವೇಳೆ ಮನೆಯ ಕೊಠಡಿಯೊಂದರಲ್ಲಿ ಕಿರುಚಾಟ ಕೇಳಿ ಬಂದಿದ್ದು, ಬಾಗಿಲು ತೆರೆದು ನೋಡಿದಾಗ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂದು ಮಗಳು ಹೇಳಿದ್ದಾಳೆ. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.


