ಬೆಂಗಳೂರು: ಆ್ಯಸಿಡ್ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಕೊನೆಯ ಹಂತದ ಸರ್ಜರಿ ನಡೆಸಿದ್ದು, ಯುವತಿಗೆ ಆರೋಗ್ಯ ಸುಧಾರಿಸಲು ಎರಡು ತಿಂಗಳ ಕಾಲವಕಾಶ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಇಂದು ಹೈ ಲೆವೆಲ್ ಎಕ್ಯೂಪ್ಮೆಂಟ್ ಬಳಸಿ ಸರ್ಜರಿ ಮಾಡಲಾಗಿದೆ. ಇನ್ನು ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಸಚಿವ ಡಾ. ಸುಧಾಕರ್ ಆರೋಗ್ಯ ವಿಚಾರಿಸಿದ್ದಾರೆ.
ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಕರೆ ತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದರು. ಸದ್ಯ ಆತನ ಪರಿಸ್ಥಿತಿಯ ಫೋಟೋವನ್ನು ಕಂಡ ಸಂತ್ರಸ್ತೆ ಯುವತಿ ಖುಷಿಪಟ್ಟಿದ್ದು,ತನ್ನ ಈ ಸ್ಥಿತಿಗೆ ಕಾರಣನಾದವನ ಗತಿಯನ್ನು ಕಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾಳೆ ಎನ್ನಲಾಗಿದೆ.
“ಯುವತಿಗೆ ಸ್ಕಿನ್ ಬ್ಯಾಂಕ್ ನಿಂದ ಸ್ಕಿನ್ ನೀಡಲಾಗುವುದು.ಆ್ಯಸಿಡ್ ದಾಳಿಯಿಂದ ಶೇ.35ರಷ್ಟು ದೇಹದ ಭಾಗಗಳು ಸುಟ್ಟುಹೋಗಿವೆ. ಸಂತ್ರಸ್ತೆಯ ಸ್ಥಿತಿ ಸ್ಪಲ್ಪ ಕ್ಲಿಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಾಗಿದೆ. ಪೂರ್ಣ ಚೇತರಿಕೆ ಕಾಣಲು 2 ತಿಂಗಳು ಸಮಯಬೇಕು.ಯುವತಿಯು ಸುಧಾರಿಸುವ ಬಗ್ಗೆ ವೈದ್ಯರು ಭರವಸೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB