ತ್ರಿಪುರಾ: ವ್ಯಕ್ತಿಯೊರ್ವ ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದು ಸಾವನ್ನಪ್ಪಿರುವ ಘಟನೆ ತ್ರಿಪುರಾದ ಖೋವೈ ಜಿಲ್ಲೆಯ ಲಂಕಾಪುರ ಎಡಿಸಿ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಕಾರ್ತಿಕ್ ಮೋಹನ್ ದೆಬ್ಬರ್ಮ ಮೃತಪಟ್ಟಿರುವ ವ್ಯಕ್ತಿ. ಕಾರ್ತಿಕ್ ಮೋಹನ್ ದೆಬ್ಬರ್ಮ ದಿನನಿತ್ಯ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಕುಡಿದ ಅಮಲಿನಲ್ಲಿ ಆಸಿಡ್ ತುಂಬಿದ ಬಾಟಲಿಯನ್ನು ಶುಕ್ರವಾರ ರಾತ್ರಿ ಕುಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ದೆಬ್ಬರ್ಮ ಸ್ಥಳೀಯ ಹಳ್ಳಿಗಾಡಿನ ಮದ್ಯದ ಅಂಗಡಿಯಲ್ಲಿ ಅತಿಯಾಗಿ ಕುಡಿದಿದ್ದು, ಮನೆಗೆ ಹೋಗಿ ಮಲಗಿಕೊಂಡಿದ್ದಾನೆ. ನಂತರ ಮಧ್ಯರಾತ್ರಿ ಎದ್ದು, ಮದ್ಯ ಕುಡಿಯಲು ಹುಡುಕಾಡಿದ್ದಾನೆ. ಆದರೆ ಆತನ ಕೈಗೆ ಮನೆಯಲ್ಲಿದ್ದ ಆಸಿಡ್ ಬಾಟಲಿ ಸಿಕ್ಕಿದೆ. ಅದನ್ನೇ ಮದ್ಯ ಎಂದು ತಿಳಿದ ದೆಬ್ಬರ್ಮ ಆಸಿಡ್ ಕುಡಿದಿದ್ದಾನೆ ಎಂದು ತಿಳಿದುಬಂದಿದೆ.
ಆಸಿಡ್ ಕುಡಿದ ತಕ್ಷಣ ದೆಬ್ಬರ್ಮ ಪ್ರಜ್ಞಾಹೀನನಾಗಿದ್ದಾನೆ. ದೆಬ್ಬರ್ಮ ಕುಟುಂಬ ಸದಸ್ಯರು ಆತ ಪ್ರಜ್ಞಾಹೀನನಾಗಿರುವುದನ್ನು ನೋಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು ಎಂದು ಮೂಲಗಳು ಹೇಳಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB