ಹೆಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಚಾಮರಾಜನಗರ ಲೋಕಸಭೆಯ ಸಂಸದ ಸುನೀಲ್ ಬೋಸ್ ಅವರ ಜನ್ಮದಿನದ ಹ್ಯಾಂಡ್ ಪೋಸ್ಟ್ ಸರ್ಕಲ್ ನಲ್ಲಿ ಕೆಕ್ ಕಟ್ ಮಾಡಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕಾಂಗ್ರೆಸ್ ಯುವ ಮುಖಂಡ ಡಾ.ಎಸ್.ಮರಿದೇವಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡು ಆಚರಣೆ ಮಾಡಲಾಯಿತು.
ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಡಾ.ಎಸ್.ಮರಿದೇವಯ್ಯ, ಸಂಸದ ಸುನೀಲ್ ಬೋಸ್ ಉತ್ತಮ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ಜನರು ಅವರನ್ನು ಮೊದಲ ಬಾರಿಗೆ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ವಿವಿಧ ಯೋಜನೆಗಳ ಬಗ್ಗೆ ಸಂಸತ್ತಿನಲ್ಲಿ ಮಾಡಿದ್ದಾರೆ. ದಕ್ಷಿಣ ಬಹುಭಾಗವನ್ನು ಒಳಗೊಂಡಿದೆ. ಅವುಗಳನ್ನು ಅಭಿವೃದ್ಧಿಗೊಳಿಸಲು ಅನುದಾನವನ್ನು ಬಿಡುಗಡೆ ಮಾಡಬೇಕು ಸಂಸತ್ತಿನಲ್ಲಿ ಒತ್ತಾಯ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಪ್ರೇಮ್ ಸಾಗರ್, ಜಿಲ್ಲಾ ಯಂಗ್ ಬ್ರಿಗೇಡ್ ಉಪಾಧ್ಯಕ್ಷ ಮಾನವೀಯಾಕರ್, ಕನ್ನೇನಹಳ್ಳಿ ಅವಿನಾಶ್, ಸ್ಟುಡಿಯೋ ಮಧು, ಅನಿಲ್ ಕುಮಾರ್, ಜೆ.ಎಸ್.ಮರಿಸ್ವಾಮಿ, ಮಂಜು ಹೈರಿಗೆ, ಪ್ರತಾಪ್, ನರಸಿಂಹಮೂರ್ತಿ, ಶಿವರಾಜ್, ಸಂತೋಷ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC