ಸರಗೂರು: ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಭಾನುವಾರದಂದು ಚಾಮರಾಜನಗರ ಲೋಕಸಭಾ ಸಂಸದ ಸುನೀಲ್ ಬೋಸ್ ರವರ 44 ನೇ ಹುಟ್ಟು ಹಬ್ಬವನ್ನು ಸುನೀಲ್ ಬೋಸ್ ಅಭಿಮಾನಿಗಳ ಬಳಗದ ವತಿಯಿಂದ ಸರಳವಾಗಿ ಕೇಕ್ ಕಟ್ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಿಸಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡುವ ಮೂಲಕ ಆಚರಣೆ ಮಾಡಲಾಯಿತು.
ನಂತರ ಮಾತನಾಡಿದ ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೋಷಿತರು, ಬಡವರು ಮತ್ತು ನಿರ್ಗತಿಕರ ಪಾಲಿಗೆ ಸುನೀಲ್ ಬೋಸ್ ಸ್ಪಂದಿಸುತ್ತಿದ್ದರು. ಇಂತಹ ಕಾರ್ಯಕ್ರಮಗಳ ಮೂಲಕ ಅವರ ಹುಟ್ಟು ಹಬ್ಬದವನ್ನು ನಿಜವಾದ ಅರ್ಥವನ್ನು ಅಭಿಮಾನಿಗಳು ನೀಡಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಸ್.ಸಿ.ಮಹದೇವಪ್ಪರವರು ಎರಡು ತಾಲ್ಲೂಕು ಅಭಿವೃದ್ಧಿಗೊಳಿಸಲು ಅವರು ತಾಲೂಕಿನಲ್ಲಿ ಸುಮಾರು ವರ್ಷಗಳ ಮಂತ್ರಿಯಾಗಿ ಹಲವು ಜನಪ್ರಿಯ ಯೋಜನೆಯಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇದರ ಜತೆಗೆ ರವರು ಮಗನಾದ ಸುನೀಲ್ ಬೋಸ್ ರವರನ್ನು ರಾಜಕೀಯಕ್ಕೆ ತರಲು ಶ್ರಮ ಪಟ್ಟಿದ್ದಾರೆ.ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.
ಅಣ್ಣ ಸುನೀಲ್ ಬೋಸ್ ರವರಿಗೆ ಭಗವಂತ ಆಯಸ್ಸು ಆರೋಗ್ಯ ಭಾಗ್ಯ ಹಾಗೂ ಬುದ್ಧ ಬಸವ ಅಂಬೇಡ್ಕರ್ ಹಾಗೂ ಫುಲೆ.ಸಾಹು.ನಾಲ್ವಡಿ ರವರ ಆರ್ಶೀವಾದ ಸದಾ ಅವರ ಮೇಲೆ ಇರಲಿ. ಇನ್ನೂ ಹೆಚ್ಚಿನ ಜನಸೇವೆ ಮಾಡವ ಶಕ್ತಿಯನ್ನು ತುಂಬಲಿ ಎಂದು ಹುಟ್ಟು ಹಬ್ಬದ ಶುಭ ಹಾರೈಸಿದರು.
ಧ್ರುವನಾರಾಯಣ್ ರವರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಘೋಷಣೆ ಮಾಡಿಸಿದರು.ದಿ ಮಾಜಿ ಶಾಸಕ ಚಿಕ್ಕಮಾದು ರವರು ಜೊತೆಗೂಡಿ ಸಾಕಷ್ಟು ಎರಡು ತಾಲ್ಲೂಕನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದರು.
ಈ ಸಂದರ್ಭದಲ್ಲಿ ಆದಿಕರ್ನಾಟಕ ಮಹಾಸಭಾ ಗೌರವಾಧ್ಯಕ್ಷ ಬಸವರಾಜು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಗರಾಜ್, ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಕುಂದೂರು ಮೂರ್ತಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚನ್ನೀಪುರ ಚೆಲುವರಾಜು ,ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಮುಖಂಡರು ತುಂಬಸೋಗೆ ನಾಗಣ್ಣ, ಚಿನ್ನಯ್ಯ, ಸೋಮಣ್ಣ, ಪ್ರಭಾಕರ್,ವಿಷಕಂಠ, ಭಾನುಪ್ರಕಾಶ್, ಲಂಕೆ ಸೋಮಶೇಖರ್, ಮಣಿಕಂಠ, ಹಾಲಯ್ಯ, ಪಾಟೀಲ್, ನವೀನ್, ಕಾಮಿಸ್ವಾಮಿ, ಬಿಲ್ಲಯ್ಯ, ಸೋಮಣ್ಣ, ಸೋಮೇಶ್, ಈಶ್ವರ್, ಮಹದೇವ ಮೂರ್ತಿ, ಮಾದಪ್ಪ, ಮುದನಹಳ್ಳಿ ಶಿವರಾಜು, ಸೋಮಣ್ಣ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC