ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಇತ್ತೀಚಿಗಷ್ಟೇ ಮಹೇಶ್ ಬಾಬು ಅನಾರೋಗ್ಯ ದಿಂದ ಹಾಸಿಗೆ ಹಿಡಿದ ತನ್ನ ಅಭಿಮಾನಿಯ ಕುಟುಂಬವನ್ನು ದತ್ತು ಪಡೆದು ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ಆರ್ಥಿಕವಾಗಿ ಮಾತ್ರವಲ್ಲದೆ ಇಡೀ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಸಹಾಯ ಮಾಡಿದ್ದಾರೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ರಾಜೇಶ್ ಎಂಬವರು ಮಹೇಶ್ ಬಾಬು ಅವರ ಕಟ್ಟಾ ಅಭಿಮಾನಿ ಎನ್ನಲಾಗಿದೆ. ಆದರೆ, ಕೆಲ ದಿನಗಳಿಂದ ರಾಜೇಶ್ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿ ಹಾಸಿಗೆ ಹಿಡಿದ್ದಿದ್ದರು. ಮನೆಯ ಆಧಾರ ಸ್ಥಂಭವಾಗಿದ್ದ ರಾಜೇಶ್ ಹಾಸಿಗೆ ಹಿಡಿದಿದ್ದರಿಂದ ಆತನ ಕುಟುಂಬ ಆರ್ಥಿಕ ಸಮಸ್ಯೆ ಅನುಭವಿಸಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಮಹೇಶ್ ಬಾಬು ಗಮನಕ್ಕೆ ಬಂದಿದೆ. ಕೂಡಲೇ ಸ್ಪಂದಿಸಿದ ಅವರು ರಾಜೇಶ್ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ.
ಅಭಿಮಾನಿಯ ಮೂವರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತಂದೆ ರಾಜೇಶ್ ಹಾಸಿಗೆ ಹಿಡಿದ ನಂತರ ಹಿರಿಯ ಮಗ ಅರ್ಜುನ್, ಸ್ಥಳೀಯ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಮನೆ ಖರ್ಚು ನಿಭಾಯಿಸುತ್ತಿದ್ದ. ಇದೀಗ ಈ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ನಟ ಮಹೇಶ್ ಬಾಬು ತೆಗೆದುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA