ಡಾಲಿ ಧನಂಜಯ್ ಮತ್ತು ಶಿವರಾಜ್ ಕುಮಾರ್ ನಟನೆಯ ಉತ್ತರಕಾಂಡ ಸದ್ಯ ಒಂದಲ್ಲ ಒಂದು ಕಾರಣಕ್ಕೆ ಸದಾ ಸದ್ದು ಮಾಡುತ್ತಿರುತ್ತದೆ. ಈಗಾಗ್ಲೆ ಸಾಕಷ್ಟು ಸ್ಟಾರ್ ನಟ, ನಟಿಯರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ನಿರ್ಮಾಣ ಹಂತದಲ್ಲಿರುವ ಚಿತ್ರದಲ್ಲಿ ನಟಿ ಭಾವನಾ ಮೆನನ್ ಕೂಡ ನಟಿಸಿದ್ದು ವೀರವ್ವ ಆಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಭಾವನಾ ಅವರ ಫಸ್ಟ್ ಲುಕ್ ಔಟ್ ಆಗಿದೆ. ಉತ್ತರಕಾಂಡ ಚಿತ್ರದ ಮೂಲಕ ತಮಿಳು ನಟಿ ಐಶ್ವರ್ಯಾ ರಾಜೇಶ್ ಅವರು ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇದರೊಂದಿಗೆ ನಟಿ ಭಾವನಾ ಮೆನನ್ ಅವರು ನಿರ್ಣಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್–ಪ್ಯಾಕ್ಡ್ ಕಮರ್ಷಿಯಲ್ ಎಂಟರ್ ಟೈನರ್ ಎಂದು ಬಿಂಬಿತವಾಗಿರುವ ಉತ್ತರಕಾಂಡ ಚಿತ್ರತಂಡ ಇದೀಗ ಭಾವನಾ ಅವರ ಜನ್ಮದಿನದ ಅಂಗವಾಗಿ ಅವರ ಪಾತ್ರವನ್ನು ಪರಿಚಯಿಸಿದ್ದು, ನಟಿ ವೀರವ್ವ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಉಮಾಶ್ರೀ, ದಿಗಂತ್ ಮಂಚಾಲೆ, ಚೈತ್ರ ಜೆ ಆಚಾರ್, ರಂಗಾಯಣ ರಘು, ವಿಜಯ್ ಬಾಬು, ಮತ್ತು ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. KRG ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿರುವ ಉತ್ತರಕಾಂಡ ಚಿತ್ರದ ಮೂಲಕ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296