ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಸುದ್ದಿ ಅಂತರ್ಜಾಲದಲ್ಲಿ ವೈರಲ್ ಆದ ನಂತರ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಪೂಜಾ ಅವರು ಕ್ಲಬ್ ನ ಉದ್ಘಾಟನೆಗೆ ದುಬೈಗೆ ಹೋಗಿದ್ದ ವೇಳೆ ಅಲ್ಲಿ ವಾಗ್ವಾದ ಉಂಟಾಗಿದ್ದು ಆಕೆಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ವರದಿ ಕೇಳಿ ಬಂದಿತ್ತು. ಆದರೆ, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ, ಇದು ಸುಳ್ಳು ಸುದ್ದಿ ಎಂದು ನಟಿಯ ತಂಡದವರು ಹೇಳಿದ್ದಾರೆ. ನಟಿಯು ಇನ್ನೂ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಟಾಲಿವುಡ್ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ದುಬೈನಲ್ಲಿ ಜಗಳ ಮಾಡಿಕೊಂಡಿದ್ದು, ಈ ಹಿನ್ನೆಲೆ ಕೆಲವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬಾಲಿವುಡ್ ಸಾಮಾಜಿಕ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಪೂಜಾ ಹೆಗ್ಡೆ ತಂಡ ಪ್ರತಿಕ್ರಿಯಿಸಿದೆ. ಇದು ಸಂಪೂರ್ಣ ಆಧಾರ ರಹಿತ ಸುದ್ದಿಯಾಗಿದ್ದು, ಸಾಕ್ಷಿ ಇಲ್ಲದೆ ಬರೆಯುವುದಾದರೂ ಹೇಗೆ ಎಂದು ಪೂಜಾ ಹೆಗ್ಡೆ ತಂಡ ಪ್ರಶ್ನಿಸಿದೆ. ಇಂತಹ ಸುಳ್ಳು ಸುದ್ದಿಗಳನ್ನು ಜನರು ನಂಬಬೇಡಿ ಎಂದು ಮನವಿ ಮಾಡಿದೆ.


