ಕಬಿನಿ ಜಲಾನಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ನಂಜನಗೂಡು ಬಳಿ ಮೈಸೂರು ಊಟಿ ರಸ್ತೆ ಬಂದ್ ಆಗಿದ್ದು, ಮಲ್ಲನ ಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿ 766 ಸಂಪೂರ್ಣ ಬಂದ್ ಆಗಿದೆ. ಚಿಕ್ಕಯ್ಯನ ಛತ್ರ ಗ್ರಾಮದಿಂದ ಮಲ್ಲನ ಮೂಲೆ ಮಠದ ವರೆಗೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಮೈಸೂರು ಊಟಿ ರಸ್ತೆ ಸಂಚಾರಕ್ಕೆ ಸವಾರ ಪರದಾಡುವಂತಾಗಿದ್ದು, ಸದ್ಯ ಬದಲಿ ಮಾರ್ಗಗಳ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೈಸೂರಿಂದ ನಂಜನಗೂಡು, ಗುಂಡ್ಲುಪೇಟೆ ಕಡೆ ಹೋಗುವ ವಾಹನಗಳು ತಾಂಡವಪುರದ ಬಳಿ ಎಡಕ್ಕೆ ತಿರುಗಿ ಕೆಂಪಿಸಿದ್ದನ ಹುಂಡಿ, ಹೆಜ್ಜಿಗೆ ಮಾರ್ಗ ನಂಜನಗೂಡು ಸಂಚಾರಿಸಲು ಸೂಚನೆ ನೀಡಲಾಗಿದೆ.
ಗುಂಡ್ಲುಪೇಟೆ,ನಂಜನಗೂಡಿನಿಂದ ಮೈಸೂರಿಗೆ ಬರುವ ವಾಹನಗಳು ಕಲ್ಲಹಳ್ಳಿ ಗೊದ್ದನಪುರದ ಮೂಲಕ ಹೊಸ ಸೇತುವೆ ಮೂಲಕ ಹೋಗಲು ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಬದಲಿ ಮಾರ್ಗ ಹುಡುಕಿಕೊಂಡು ಹೋಗಲು ಪ್ರಯಾಣಿಕರು ಪರದಾಡುವಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


