ಬೆಂಗಳೂರು: ಕ್ರಿಸ್ ಮಸ್ ಹಬ್ಬಕ್ಕೆ ರಜೆಯಿರುವ ಹಿನ್ನೆಲೆ ಕೆಎಸ್ ಆರ್ ಟಿಸಿ ಹೆಚ್ಚುವರಿಯಾಗಿ 1000 ಬಸ್ ವ್ಯವಸ್ಥೆ ಮಾಡಿದೆ. ಪ್ರಯಾಣಿಕರಿಗೆ ತೊಂದರೆ ಆಗದ ಹಿನ್ನಲೆ ಡಿ. 22 ರಿಂದ ಡಿ.24 ರವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ ಹೆಚ್ಚುವರಿ ಬಸ್ ಗಳು ಕಾರ್ಯನಿರ್ವಹಿಸಲಿವೆ. ಅದರಂತೆ ಡಿ.25 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಗಳು ಕಾರ್ಯಾಚರಣೆಗೊಳ್ಳಲಿದೆ.
ವಿವಿಧ ಸ್ಥಳಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು ಪ್ರಯಾಣಿಕರು ಮೊದಲೇ ಸೀಟ್ ರಿಸರ್ವ್ ಮಾಡಬಹುದು ಎಂದು ತಿಳಿಸಲಾಗಿದೆ. ರಾಜ್ಯದ ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಗೋಕರ್ಣ, ಶಿರಸಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಬಸ್ ಗಳು ಹೊರಡಲಿದ್ದು, ಅದರಂತೆ ತಮಿಳುನಾಡು, ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಪ್ರಯಾಣಿಕರು ಮೊದಲೇ ಸೀಟ್ ರಿಸರ್ವ್ ಮಾಡಬಹುದಾಗಿದೆ. ಇ-ಟಿಕೆಟ್ ಸಹ ವೆಬ್ ಸೈಟ್ ಮೂಲಕ ಪಡೆಯಬಹುದು.
ಇನ್ನು ಕೆಎಸ್ ಆರ್ ಟಿಸಿಯು ಪ್ರತಿ ಹಬ್ಬಗಳಲ್ಲೂ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ಗಳನ್ನು ಏರ್ಪಡಿಸುತ್ತದೆ. ಇದರಿಂದ ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವ ಮೂಲಕ ಪ್ರಯಾಣಿಕರಿಗೆ ಸಹಾಯ ಮಾಡುತ್ತಿದೆ.


