ತುರುವೇಕೆರೆ: ಜನವರಿ 2ರಂದು ನಡೆದ ಆದಿ ಜಾಂಬವ ಸಮ್ಮೇಳನ ಯಶಸ್ವಿಯ ಹಿನ್ನೆಲೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಸಾಲ ಜಯರಾಮ್ ಮಾದಿಗ ಸಮಾಜದ ಮುಖಂಡರುಗಳಿಗೆ ಶಾಲು ಹಾಕಿ ಸನ್ಮಾನಿಸಿದರು.
ತಾಲೂಕು ಆದಿಚಾಂಬವ ಸಮಾಜದ ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಮ್ಮೇಳನದಲ್ಲಿ ಮಾದಿಗ ಸಮಾಜವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರಿಗೆ ಶಾಸಕರು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಶಾಸಕ ಮಸಾಲ ಜಯರಾಮ್, ನಾನು ಕೂಡ ನಿಮ್ಮ ಸಮಾಜದ ಯಾವುದೇ ಹೋರಾಟದಲ್ಲಿ ಸದಾ ನಿಮ್ಮೊಂದಿಗೆ ಭಾಗಿಯಾಗಿ ಇರುತ್ತೇನೆ. ಈಗ ನಡೆಸುತ್ತಿರುವ ಒಳ ಮೀಸಲಾತಿಯ ಹೋರಾಟವನ್ನು ಬರುವ ಚುನಾವಣೆಯೊಳಗೆ ಜಾರಿಗೆ ತರಲಾಗುತ್ತದೆ. ಇದರ ಬಗ್ಗೆ ನಮ್ಮ ಕೇಂದ್ರ ಹಾಗೂ ಆಯೋಗದ ಅಧ್ಯಕ್ಷರು ಕೂಡ ನನ್ನೊಂದಿಗೆ ಚರ್ಚಿಸಿ ಭರವಸೆಯನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆದಿ ಜಾಂಬವ ಸಮಾಜದ ತಾಲೂಕು ಅಧ್ಯಕ್ಷರಾದ ವಿ.ಟಿ.ವೆಂಕಟರಾಮಯ್ಯ, ಗೌರವಾಧ್ಯಕ್ಷರಾದ ನೊಣವಿನಕೆರೆ ರಾಮಕೃಷ್ಣಯ್ಯ, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಟಿ.ಕೆ.ಚಿದಾನಂದ, ಮುಲ್ಲೂರು ತಿಮ್ಮೇಶ್, ಯಗಚಿ ಕಟ್ಟೆ ಕುಮಾರ್, ಕೊಂಡಜ್ಜಿ ಜವರಪ್ಪ, ಕೆ.ಟಿ.ಗೋವಿಂದರಾಜು, ಯೋಗೀಶ್ , ಬಿ ಪುರ ತಮ್ಮಯ್ಯ ,ಮುತ್ತುಗದಹಳ್ಳಿ ಶಿವಣ್ಣ, ಶಿಕ್ಷಕರಾದ ಬೋರಪ್ಪ, ಇನ್ನೂ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1