ವರ್ಗಾವಣೆ ಬೇಕಿದ್ದಲ್ಲಿ ಒಂದು ರಾತ್ರಿಯ ಮಟ್ಟಿಗೆ ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು’ ಎಂದು ಹೇಳಿದ್ದ ವಿದ್ಯುತ್ ಇಲಾಖೆಯ ಮೇಲಧಿಕಾರಿಯ ಮಾತಿನಿಂದ ನೊಂದು ಉದ್ಯೋಗಿಯೋರ್ವ ಡೀಸೆಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಖೀಂಪುರ್‌ನಲ್ಲಿ ನಡೆದಿದೆ.
ಲೈನ್ಮನ್ ಗೋಕುಲ ಪ್ರಸಾದ್ (೪೫) ಲಖಿಂಪುರದ ಜ್ಯೂನಿಯರ್ ಇಂಜಿನಿಯರ್ ಕಚೇರಿಯ ಹೊರಗೆ ತನ್ನ ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜ್ಯೂನಿಯರ್ ಇಂಜಿನಿಯರ್ ನಾಗೇಂದ್ರ ಕುಮಾರ ಮತ್ತು ಓರ್ವ ಗುಮಾಸ್ತೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರಸಾದ್ ಮೈಗೆ ಬೆಂಕಿ ಹಚ್ಚಿಕೊಂಡ ಬಳಿಕ ಚಿತ್ರೀಕರಿಸಲಾಗಿದ್ದ ವೀಡಿಯೊದಲ್ಲಿ ತೀವ್ರ ನೋವಿನಲ್ಲಿಯೂ ತನ್ನ ಕೃತ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಕುಮಾರ ಮತ್ತು ಆತನ ಸಹಾಯಕ ತನಗೆ ಕಿರುಕುಳ ನೀಡುತ್ತಿದ್ದರು, ತಾನು ಪೊಲೀಸರ ಮೊರೆ ಹೋಗಿದ್ದರೂ ಅವರು ನೆರವಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತ್ಯೇಕ ವೀಡಿಯೋ ಮಾಡಿ ಪ್ರತಿಕ್ರಿಯೆ ನೀಡಿರುವ ಪ್ರಸಾದ್‌ನ ಪತ್ರಿ, ಆರೋಪಿಗಳು ಮೂರು ವರ್ಷಗಳಿಂದಲೂ ತನ್ನ ಪತಿಗೆ ಹಿಂಸೆ ನೀಡುತ್ತಿದ್ದರು.
ಹೀಗಾಗಿ ಖಿನ್ನತೆಗೆ ಜಾರಿದ್ದ ಅವರು ಅದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೂ ಆರೋಪಿಗಳು ಕಿರುಕುಳವನ್ನು ನಿಲ್ಲಿಸಿರಲಿಲ್ಲ. ತನ್ನ ಪತಿಯನ್ನು ಅಲಿಗಂಜ್ಗೆ ವರ್ಗಾವಣೆ ಮಾಡಲಾಗಿತ್ತು, ಆದರೆ ಅವರಿಗೆ ಪ್ರಯಾಣ ಕಷ್ಟವಾಗುತ್ತಿತ್ತು. ಹೀಗಾಗಿ ಮನೆಗೆ ಸಮೀಪ ವರ್ಗಾಯಿಸುವಂತೆ ಕೋರಿದ್ದರು. ‘ನಿನ್ನ ಹೆಂಡತಿಯನ್ನು ನಮ್ಮ ಬಳಿಗೆ ಕಳುಹಿಸು, ನಿನಗೆ ವರ್ಗಾವಣೆ ಮಾಡುತ್ತೇವೆ ’ಎಂದು ಆರೋಪಿಗಳು ಹೇಳಿದ್ದರು ಎಂದು ಆರೋಪಿಸಿದ್ದಾಳೆ.
ವರದಿ ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


