ಹೆಚ್.ಡಿ.ಕೋಟೆ: ತಾಲ್ಲೂಕು ಆದಿಕರ್ನಾಟಕ ಮಹಾಸಭಾವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ವರ್ಷದ ಜಯಂತಿಯನ್ನು ಅಂಬೇಡ್ಕರ್ ಹಬ್ಬ ಎಂದು ಅಚರಣೆ ಮಾಡಲಾಯಿತು.
ಬೆಳ್ಳಿ ರಥೋತ್ಸವದ ಅಂಬೇಡ್ಕರ್ ಪುತ್ಥಳಿ ಭಾವಚಿತ್ರ ಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮತ್ತು ಗಣ್ಯರು ಸೇರಿ ಮೆರವಣಿಗೆಗೆ ಚಾಲನೆ ನೀಡಿದರು. ತಾಲ್ಲೂಕಿನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆಡಸಿಕೊಂಡು ಅಂಬೇಡ್ಕರ್ ಭವನದವರಿಗೆ ಸೇರಿತ್ತು.
ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಗೌತಮ ಬುದ್ದ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ. ದೀಪ ಬೆಳಗಿಸುವ ಮೂಲಕ ಶಾಸಕ ಅನೀಲ್ ಚಿಕ್ಕಮಾದು ಮತ್ತು ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆದಿಕರ್ನಾಟಕ ಮಹಾಸಭಾದ ನೂತನ ಅಧ್ಯಕ್ಷರಾದ ಹೆಚ್ .ಸಿ. ನರಸಿಂಹಮೂರ್ತಿ ಅವರ ಅದ್ಯಕ್ಷತೆಯಲ್ಲಿ ಹಾಗೂ ತಾಲ್ಲೂಕಿನ ಎಲ್ಲಾ ಸಂಘಟನೆಗಳು, ಪಕ್ಷಾತೀತವಾಗಿ, ಎಲ್ಲಾ ರಾಜಕೀಯ ಹಿರಿಯ ಹಾಗೂ ಕಿರಿಯ ಮುಖಂಡರು ಮತ್ತು ತಾಲ್ಲೂಕಿನ ಎಲ್ಲಾ ಗ್ರಾಮಗಳ ಪದಾಧಿಕಾರಿಗಳ ಸಮಕ್ಷಮದಲ್ಲಿ ಹಲವು ವರ್ಷಗಳ ನಂತರ ಈ ರೀತಿಯ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೆಚ್. ಸಿ. ನರಸಿಂಹಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮ ದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು “ಸಂವಿಧಾನ ಓದಿ“ ಎಂಬ 5,000 ಪುಸ್ತಕ ನೀಡಿದ್ದು, ಈ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ತಾಲೂಕಿನ ಪ್ರತಿ ಗ್ರಾಮ ಗ್ರಾಮಗಳಿಂದ ತಮಟೆ, ಕಂಸಾಳೆ, ನಂದೀ ಧ್ವಜ ಕರೆಸಿ, ಅದ್ದೂರಿಯಾಗಿ ಪಟ್ಟಣ ಪದವಿಪೂರ್ವ ಕಾಲೇಜಿನಿಂದ ಅಂಬೇಡ್ಕರ್ ಭವನದವರೆವಿಗೂ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸ್ನೇಹಿ ಸ್ವಾಮೀಜಿ ಉರಿಲಿಂಗಪೆದ್ದ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಪಕ್ಷಾತೀತವಾಗಿ ಎಲ್ಲಾ ಸಮುದಾಯದ ಮುಖಂಡರು ಕರೆದು ಕಾರ್ಯಕ್ರಮ ಮಾಡಿದ್ದಿರಿ. ಕರ್ನಾಟದಲ್ಲಿ ಮೊದಲ ಬಾರಿಗೆ ಹೆಚ್.ಡಿ.ಕೋಟೆಯಲ್ಲಿ ಮಾಡಿದ್ದಿರಿ ನಮಗೆ ಹೆಮ್ಮೆ ಎನಿಸುತ್ತಿತ್ತು ಎಂದರು.
ಮುಖ್ಯ ಭಾಷಣ ಮಾಡಿದ ಮಾಜಿ ಸಚಿವರು ಡಾ.ಹೆಚ್. ಸಿ.ಮಹದೇವಪ್ಪ ಮಾತನಾಡಿ, ಅಂಬೇಡ್ಕರ್, ಬುದ್ಧ, ಬಸವಣ್ಣ ದಾರಿಯಲ್ಲಿ ನಡೆಯಿರಿ. ಅವರ ತತ್ವವನ್ನು ಪಾಲಿಸಿ. ಅವರು ನಮಗೆ ಸಂವಿಧಾನ ವನ್ನು ರಚನೆ ಮಾಡಿಲಿಲ್ಲ ಎಂದರೆ ನಾವು ಈ ಜಗತ್ತಿನ ಲ್ಲಿ ಇರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದರು.
ಮಾಜಿ ಸಂಸದರು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಂ ಶಿವಣ್ಣಕೋಟೆ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ, ಗೌರವಾಧ್ಯಕ್ಷ ಆದಿಕರ್ನಾಟಕ ಮಹಾಸಭಾ ಚಂದ್ರ ಶೇಖರ್, ಅಧ್ಯಕ್ಷರು ಅಂಬೇಡ್ಕರ್ ಟ್ರಸ್ಟ್ ಹೆಚ್.ಸಿ.ಲಕ್ಷ್ಮಣ್, ಕಾರ್ಯಾಧ್ಯಕ್ಷ ಅಂಬೇಡ್ಕರ್ ಟ್ರಸ್ಟ್ ಚಾ.ನಂಜುಂಡಮೂರ್ತಿ, ಮಾಜಿ ಅಧ್ಯಕ್ಷರು ಆದಿಕರ್ನಾಟಕ ಸರಗೂರು ಶಿವಣ್ಣ, ಪುಟ್ಟಯ್ಯಮಲಾರ, ಸೋಗಹಳ್ಳಿಶಿವಣ್ಣ, ಜಿಲ್ಲಾ ಸಂಚಾಲಕರು ದಸಂಸ ಕೋಟೆ ಬೆಟ್ಟಯ್ಯ, ಹಿರಿಯ ದಲಿತ ಮುಖಂಡಭೀಮನಹಳ್ಳಿ ಮಹದೇವ., ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ವೆಂಕಟಸ್ವಾಮಿ, ಭಾಗ್ಯಲಕ್ಷ್ಮೀ, ನಿಂಗರಾಜು, ಪಿ ರವಿ.ಚಿಕ್ಕವೀರನಾಯಕ, ಅಧ್ಯಕ್ಷ ಶಿವಮ್ಮ ಚಾಕಹಳ್ಳಿಕೃಷ್ಣ, ಪ.ಪಂ. ಸರಗೂರು ಅಧ್ಯಕ್ಷ ರಾಧಿಕಾ ಶ್ರೀನಾಥ್, ಗೀತಾಗಿರಿಗೌಡ.ವಿನಯ್ ಪ್ರಸಾದ್, ನಂಜಪ್ಪ, ಮಧುಕುಮಾರ್, ಪ್ರಮ್ ಸಾಗರ್, ಕವಿತಾಸುರೇಶ್, ಎಸ್ .ಎಲ್ .ರಾಜಣ್ಣ, ಚಲುವಕೃಷ್ಣ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಪುಟ್ಟರಾಜು, ಪಿಎಲ್ಡಿ ಬ್ಯಾಂಕ್ ಸದಸ್ಯ ಎಂಡಿ ಮಂಚಯ್ಯ , ತಾಲೂಕಿನ ಎಲ್ಲಾ ಸಂಘಟನೆಗಳು, ಆದಿಕರ್ನಾಟಕ ಮಹಾಸಭಾದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು., ಎಲ್ಲಾ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


