ಗುಬ್ಬಿ: ವಿದ್ಯುತ್ ಲೈನ್ ಗೆ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ಬೆಳೆದು ನಿಂತ ಅಡಿಕೆ ಹಾಗೂ ಎಲೆ ಅಂಬುಗಳನ್ನು ಬೆಸ್ಕಾಂ ಅಧಿಕಾರಿಗಳು ಕತ್ತರಿಸಿ ಹಾಕಿರುವ ಘಟನೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
ಗುಬ್ಬಿ ತಾಲೂಕು ಕಸಬಾ ಹೋಬಳಿಯ ಹಳೇಗುಬ್ಬಿ ಗ್ರಾಮದ ಗಂಗ ರೇವಣ್ಣ ರವರಿಗೆ ಸೇರಿದ ಸರ್ವೆ ನಂಬರ್ 101/4 ರಲ್ಲಿ ಬೆಸ್ಕಾಂನ ವಿದ್ಯುತ್ ತಂತಿಗಳು ತೋಟದ ಮಧ್ಯೆ ಭಾಗದಲ್ಲಿ ಸುಮಾರು ವರ್ಷಗಳಿಂದ ಇದ್ದರು ಸಹ ಅದನ್ನು ಪರ್ಯಾಯವಾಗಿ ಸ್ಥಳಾಂತರ ಮಾಡದೇ ಇಂದು ಬೆಸ್ಕಾಂ ಸಿಬ್ಬಂದಿ ತೋಟದಲ್ಲಿ ಕಾಡು ತೆರವುಗೊಳಿಸುವ ನೆಪದಲ್ಲಿ ಲೈನ್ ಮ್ಯಾನ್ ಗಳು ಹಾಗೂ ಎಸ್. ಓ ಜಮೀನಿನ ಮಾಲೀಕರಿಗೆ ಯಾವುದೇ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸುಮಾರು ಎಂಟರಿಂದ 10 ಫಲ ಬಿಡುವ ಅಡಿಕೆ ಮರಗಳನ್ನು ಹಾಗೂ ಅಡಿಕೆ ಮರಕ್ಕೆ ಎಬ್ಬಿಸಿರುವ ಎಲೆ ಅಂಬು ಗಳನ್ನು ಸಹ ಮಾನವೀಯತೆ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿ ದುರ್ವತನೆ ತೋರಿದ್ದಾರೆ ಎಂದು ರೈತ ಗಂಗ ರೇವಣ್ಣ ಮತ್ತು ಕುಟುಂಬದವರು ಅಳಲಲು ತೊಂಡಿಕೊಂಡಿದ್ದಾರೆ.
ಸುಮಾರು ಇಂದಿನ ದರದ ಪ್ರಕಾರ ಎಲೆಯ ಪೆಂಡಿಗೆ ಮೂರರಿಂದ ನಾಲ್ಕು ಸಾವಿರ ಬೆಲೆಯಿದ್ದು, ಒಂದೊಂದು ಮರದಲ್ಲಿ ಸುಮಾರು ಮೂರರಿಂದ ನಾಲ್ಕು ಕೆ.ಜಿ. ಫಲ ಬಿಡುವ ಮರಗಳನ್ನು ಧರಗುರುಳಿಸಿರುವುದು ಏಷ್ಟು ಸಮಂಜಸ? ತಮ್ಮ ಮಕ್ಕಳಂತೆ 15 ರಿಂದ 20 ವರ್ಷಗಳಿಂದ ಸಾಕಿದ ಅಡಿಕೆ ಮರಗಳನ್ನು ಏಕಾಏಕಿ ಕಡಿದುಹಾಕಿ ರೈತನಿಗೆ ಅನ್ಯಾಯವೆಸಗಿದ ಲೈನ್ ಮ್ಯಾನ್ ಹಾಗೂ ಎಸ್ ಓ ಇವರುಗಳನ್ನು ಕೆಲಸದಿಂದ ಅಮಾನತು ಮಾಡುವಂತೆ ರೈತ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಗಂಗಾ ರೇವಣ್ಣ ತನ್ನ ಸ್ವಂತ ಖರ್ಚಿನಲ್ಲಿ ಲೈನ್ ಬದಲಾವಣೆ ಮಾಡಲು ಕಂಬ ಹಾಗೂ ವಿದ್ಯುತ್ ತಂತಿಗಳನ್ನು ತಂದಿದ್ದರು ಸಹ ಬೆಸ್ಕಾಂ ಅಧಿಕಾರಿಗಳಿಂದ ನಷ್ಟ ಅನುಭವಿಸುವಂತಾಗಿದ್ದು ಇದನ್ನು ಯಾರು ಸರಿಪಡಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಘಟನೆ ಸಂಬಂಧ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ, ರೈತರು ಬೆಸ್ಕಾಂ ಅಧಿಕಾರಿಗಳಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಈ ಘಟನೆ ಅಧಿಕಾರಿಗಳ ದರ್ಪಕ್ಕೆ ಹಿಡಿದ ಕೈಗನ್ನಡಿಯಾಗಿದ. ರೈತನಿಗೆ ಆದ ನಷ್ಟವನ್ನು ಬೆಸ್ಕಾಂ ಅಧಿಕಾರಿಗಳೇ ಬರಿಸಿ ಕೊಡಬೇಕು ಎ. ಇ.ಇರವರಿಗೆ ಸರಿಯಾದ ಮಾಹಿತಿ ತಿಳಿಯದ ಕಾರಣ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ತಾಲೂಕಿನ ರೈತ ಸಂಘದ ಸದಸ್ಯರೊಡನೆ ಚರ್ಚಿಸಿ ಅಧಿಕಾರಿಗಳ ವಿರುದ್ಧ ಬೆಸ್ಕಾಂ ಮುಂದೆ ಮುಷ್ಕರ ನಡೆಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಸಿ.ಜಿ ಲೋಕೇಶ್, ಕುಮಾರ್,ಲಕ್ಷ್ಮಣ, ಸುರೇಶ್, ಸಿದ್ದಯ್ಯ, ನರಸಿಂಹ ಮೂರ್ತಿ, ಪ್ರಭಾಕರ್, ಗ್ರಾಮಸ್ಥರು ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz