ಶ್ರೀಹರಿಕೋಟ: ಪಿಎಸ್ ಎಲ್ ವಿ ರಾಕೆಟ್ ನಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಹೊತ್ತೊಯ್ದ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಬೇರ್ಪಟ್ಟಿದ್ದು, 125 ದಿನಗಳ ಪ್ರಯಾಣದಲ್ಲಿ ಸೂರ್ಯನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಲಿದೆ ಎಂದು ಇಸ್ರೋ ತಿಳಿಸಿದೆ.
ಬಾಹ್ಯಾಕಾಶ ನೌಕೆಯನ್ನು “ನಿಖರ ಕಕ್ಷೆ” ಯಲ್ಲಿ ಸೇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದ್ದು, ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು 235 ರಿಂದ 19,500 ಕಿಮೀ ಉದ್ದದ ದೀರ್ಘವೃತ್ತದ ಕಕ್ಷೆಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.
ಇನ್ನು ಮುಂದೆ ಆದಿತ್ಯ ಎಲ್1 125 ದಿನಗಳ ಕಾಲ ದೀರ್ಘ ಪ್ರಯಾಣವನ್ನು ನಡೆಸಲಿದೆ ಎಂದು ಎಸ್.ಸೋಮನಾಥ್ ಶ್ರೀಹರಿಕೋಟಾದ ಮಿಷನ್ ಕಂಟ್ರೋಲ್ ಸೆಂಟರ್ ನಿಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಯೋಜನಾ ನಿರ್ದೇಶಕ ನಿಗರ್ ಶಾಜಿ ಮತ್ತು ಮಿಷನ್ ಡೈರೆಕ್ಟರ್ ಬಿಜು ಅವರೊಂದಿಗೆ ಹೇಳಿದರು.


