ಚೆನ್ನೈ: ಯಾರಾದ್ರೂ ಅನುಚಿತವಾಗಿ ವರ್ತಿಸಿ ಅಡ್ಜೆಸ್ಟ್ ಮಾಡಿ ಅಂತ ಹೇಳಿದ್ರೆ ಚಪ್ಪಲಿಯಲ್ಲಿ ಹೊಡೆಯಿರಿ ಅಂತ ಮಹಿಳಾ ಕಲಾವಿದೆಯರಿಗೆ ತಮಿಳು ನಟ ವಿಶಾಲ್ ಕರೆ ನೀಡಿದ್ದಾರೆ.
ಕೇರಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆ, ಯುವತಿ ಧೈರ್ಯದಿಂದ ರಿಯಾಕ್ಟ್ ಮಾಡಬೇಕು. ಹೊಂದಾಣಿಕೆಗೆ ಅಥವಾ ಅವರ ಬೇಡಿಕೆಗಳಿಗೆ ಸಮ್ಮತಿಸಲು ಒತ್ತಾಯಿಸಿದರೆ ಚಪ್ಪಲಿಯಿಂದ ಹೊಡೆಯುವ ಧೈರ್ಯ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.
ಮಹಿಳೆಯನ್ನು ಬಳಸಿಕೊಳ್ಳಲು ಬಯಸುವವರಿಗೆ ಶಿಕ್ಷೆಯಾಗಬೇಕು. ತಮಿಳು ಚಿತ್ರರಂಗದಲ್ಲಿ ‘ಹೊಂದಾಣಿಕೆ’ಯಂತಹ ಸಮಸ್ಯೆಗಳು ಇಲ್ಲ ಎಂದು ಹೇಳಲಾಗದು. ಇಂತಹ ದೂರುಗಳು ಬಹಳ ಹಿಂದಿನಿಂದಲೂ ಇವೆ. ಇಲ್ಲಿಯೂ ಇದೇ ರೀತಿಯ ಸಮಸ್ಯೆಗಳಿರಬಹುದು ಎಂದು ಅವರು ಹೇಳಿದ್ದಾರೆ.
ಕೆಲ ಕಂಪನಿಗಳು ಕಚೇರಿಯನ್ನು ಸ್ಥಾಪಿಸಿ ಫೋಟೋಶೂಟ್ ಗೆ ಮಹಿಳೆಯರನ್ನು ಬಳಸಿಕೊಳ್ಳುತ್ತವೆ. ನಾನು ಆ ವಿಚಾರವನ್ನು ಅಲ್ಲಗಳೆಯುವುದಿಲ್ಲ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q