ಪ್ರೇಯಸಿ ಶ್ರದ್ಧಾ ವಾಕರ್ ಳ ಹತ್ಯೆ ಮಾಡಿದ ಅಫ್ತಾಬ್ ಪೂನೂವಾಲಾನನ್ನು ಫೋರೊನ್ಸಿಕ್ ಲ್ಯಾಬ್ ಗೆ ಕರೆದೊಯ್ಯುವಾಗ ಗುಂಪೊಂದು ವಾಹನದ ಮೇಲೆ ದಾಳಿ ಮಾಡಿದ್ದು, ನಮ್ಮ ವಶಕ್ಕೆ ನೀಡಿದರೆ 70 ತುಂಡುಗಳಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದೆ.
ಸೋಮವಾರ ಸಂಜೆ ಸುಮಾರು 15 ಮಂದಿಯ ಗುಂಪು ಮಾರಕಾಸ್ತ್ರಗಳಿಂದ ವಾಹನದ ಮೇಲೆ ದಾಳಿ ಮಾಡಿದೆ. ಖಡ್ಗವನ್ನು ಹಿಡಿದಿದ್ದ ಗುಂಪು ವಾಹನವನ್ನು ಹಿಂಬಾಲಿಸಿಕೊಂಡು ಬಂದು ಈ ಕೃತ್ಯ ಎಸಗಿದೆ.
ನಮ್ಮ ಸೋದರಿಯನ್ನು ಆಫ್ತಾಬ್ 35 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ್ದಾನೆ. ನಮ್ಮ ವಶಕ್ಕೆ ನೀಡಿದರೆ ಆತನನ್ನು 70 ತುಂಡುಗಳಾಗಿ ಕತ್ತರಿಸುತ್ತೇವೆ ಎಂದು ಉದ್ರಿಕ್ತ ಗುಂಪು ಆಕ್ರೋಶ ವ್ಯಕ್ತಪಡಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz