nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ

    February 21, 2026

    ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ

    February 21, 2026

    ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ

    February 21, 2026
    Facebook Twitter Instagram
    ಟ್ರೆಂಡಿಂಗ್
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    • ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ
    • ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ
    • ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ
    • ಕೆಎಎಸ್ ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪ: ಸ್ನೇಹಮಯಿ ಕೃಷ್ಣ ಬಂಧನ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ
    • ಬಳ್ಳಾರಿ: ದ್ವಿತೀಯ PUC–15,652 ವಿದ್ಯಾರ್ಥಿಗಳು, SSLC–23,271 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಭಿಮಾನಿಯ ಅಭಿಮಾನಕ್ಕೆ ಕಣ್ಣೀರು ಹಾಕಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್
    ಕೊರಟಗೆರೆ February 12, 2023

    ಅಭಿಮಾನಿಯ ಅಭಿಮಾನಕ್ಕೆ ಕಣ್ಣೀರು ಹಾಕಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್

    By adminFebruary 12, 2023No Comments2 Mins Read
    g parameshwar
    • ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.

    ಕೊರಟಗೆರೆ:  ಕರ್ನಾಟಕದ ಡಿಸಿಎಂ ಮತ್ತು ಕೊರಟಗೆರೆಯ ಶಾಸಕನಾಗಿ 5ವರ್ಷವು ಜನರ ಒಡನಾಡಿಯಾಗಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ದಿಯ ಕೆಲಸ ಮಾಡಿದ್ದೇನೆ. ಆದರೇ ನಾನು ಜನರ ಕೈಗೆ ಸಿಗೋದೇ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಆರೋಪ ಮಾಡ್ತಾರೇ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

    ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಯಾದವ ಸಮುದಾಯದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.


    Provided by
    Provided by

    ಕೊರಟಗೆರೆ ಕ್ಷೇತ್ರದ ಜನತೆಯ ಆಶೀರ್ವಾದದಿಂದ ನನಗೆ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಡಿಸಿಎಂ ಹುದ್ದೆ ದೊರೆತಿದೆ. ಭಾರತದ ಯಾವುದೇ ರಾಜ್ಯಕ್ಕೆ ಹೋದ್ರು ಅಲ್ಲಿ ಕೊರಟಗೆರೆ ಅಂದ್ರೇ ಡಾ.ಜಿ.ಪರಮೇಶ್ವರ್ ಅಂತಾರೇ. ಕೊರಟಗೆರೆ ಕ್ಷೇತ್ರಕ್ಕೆ ಕಳೆದ 5 ವರ್ಷದಲ್ಲಿ 2,500 ಕೋಟಿ ಅನುದಾನ ತಂದು ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಅಂಕಿಅಂಶದ ದಾಖಲೆಯ ಪುಸ್ತಕ ನೀಡಿ 2023ರ ಚುನಾವಣೆಗೆ ಹೋಗ್ತಿದ್ದೇನೆ ಎಂದು ತಿಳಿಸಿದರು.

    ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ, 2023ಕ್ಕೆ ಕೊರಟಗೆರೆ ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ್ ಮತ್ತೇ ಶಾಸಕರಾದ್ರೇ ಕರ್ನಾಟಕ ರಾಜ್ಯದ ಸಿಎಂ ಆಗ್ತಾರೇ. ಗೊಲ್ಲ ನುಡಿದ ಮಾತು ಎಂದಿಗೂ ಸುಳ್ಳಾಗಲ್ಲ. ಬ್ರೋಕರ್ ಮತ್ತು ದಳ್ಳಾಳಿಗಳ ಮಾತಿಗೆ ಯಾರು ಬೆಲೆ ಕೋಡಬೇಡಿ. ತುಮಕೂರು ಜಿಲ್ಲೆಯ ಗೊಲ್ಲ ಸಮುದಾಯದ ಪ್ರತಿನಿಧಿ ಒಬ್ಬರೇ ಅವರೇ ಪರಮೇಶ್ವರ್. ಪರಮೇಶ್ವರ್ ಸಿಎಂ ಆಗ್ಬೇಕು ಗೊಲ್ಲರು ಎಂಎಲ್‌ ಸಿ ಆಗ್ಬೇಕು ಅದೇ ನಮ್ಮೆಲ್ಲರ ಪ್ರತಿಜ್ಞೆ ಎಂದು ತಿಳಿಸಿದರು.

    ತುಮಕೂರು ಡಿಸಿಸಿ ಬ್ಯಾಂಕು ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಡಾ.ಜಿ.ಪರಮೇಶ್ವರ್ ಜೊತೆ ಗೊಲ್ಲ ಸಮುದಾಯ 30 ವರ್ಷದಿಂದ ಇದ್ದೀವಿ. 2023ಕ್ಕೆ ಪರಮೇಶ್ವರ್ ಕಡೆಯ ಚುನಾವಣೆ ಆಗಲಿದೆ.  ಜೇಬುಗಳ್ಳರ ಬಗ್ಗೆ ಎಚ್ಚರ ಅಗತ್ಯ. ಯಾರು ಒತ್ತಡಕ್ಕೆ ಒಳಗಾಗದೇ ಒಂದಾಗಿ. ಶ್ರೀಕೃಷ್ಣ ಪರಮಾತ್ಮನ ಹೆಸರಲ್ಲಿ ನಾವು ಘೋಷಣೆ ಮಾಡ್ತೀವಿ. ನಾವೆಲ್ಲರೂ ಮತ್ತೆ ಪರಮೇಶ್ವರ್‌ ಗೆ ಆಶೀರ್ವಾದ ಮಾಡಬೇಕಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಓಬಿಸಿ ಜಿಲ್ಲಾಧ್ಯಕ್ಷ ಪುಟ್ಟರಾಜು, ಕೊರಟಗೆರೆ ಅಧ್ಯಕ್ಷ ಆನಂದ್,  ಮಾಜಿ ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಸದಸ್ಯ ವೀರಣ್ಣ, ಗ್ರಾಪಂ ಅಧ್ಯಕ್ಷರಾದ ರಾಮಕೃಷ್ಣಯ್ಯ, ಪಾವರ್ತಮ್ಮ, ಶಿವರಾಮಯ್ಯ, ಯಾದವ ಮುಖಂಡರಾದ ರಂಗನಾಥ, ಪುಟ್ಟಣ್ಣ, ವೆಂಕಟೇಶ್, ಕೃಷ್ಣಯ್ಯ, ಚಂದ್ರು, ಲಕ್ಷ್ಮೀನರಸಪ್ಪ ನರೇಂದ್ರ, ಮುತ್ತುರಾಜು, ಶಿವರಾಮು, ಬಸವರಾಜು, ಕಾಂತರಾಜು, ನರಸಿಂಹರಾಜು, ನಾಗರಾಜು ಸೇರಿದಂತೆ ಇತರರು ಇದ್ದರು.

    ಅಭಿಮಾನಕ್ಕೆ ಕಣ್ಣೀರಿಟ್ಟ ಮಾಜಿ ಡಿಸಿಎಂ…

    ಡಾ.ಜಿ.ಪರಮೇಶ್ವರ್ ಸಿಎಂ ಆಗಲೆಂದು ಮಧುಗಿರಿ ತಾಲೂಕು ಹುಣಸೇಮರದಟ್ಟಿಯ ಗೌಡಮುದ್ದಯ್ಯ ಕಳೆದ 25ವರ್ಷದಿಂದ ಗಡ್ಡ ಬಿಟ್ಟಿದ್ದಾರೆ. ನಾನು ಆತನಿಗೇ ಏನು ಸಹಾಯ ಮಾಡಿಲ್ಲ. ಅವನ ಅಭಿಮಾನಕ್ಕೆ ನಾನು ಏನು ಕೊಡಲು ಸಾಧ್ಯವಿಲ್ಲ. ಯಾದವ ಸಮಾಜದ ಗೌಡಮುದ್ದಯ್ಯನ ಅಭಿಮಾನಕ್ಕೆ ನಾನೆಂದು ಚಿರಾಋಣಿ ಆಗಿದ್ದೇನೆ. ನಾನು ಸಿಎಂ ಆಗೇ ಆಗ್ತೀನಿ ಅನ್ನುವ ವಿಶ್ವಾಸ ನನಗಿಂತ ಹೆಚ್ಚು ಆತನಿಗಿದೆ. ಯಾದವ ಸಮುದಾಯ ನನ್ನನ್ನು ಸಾಕಿ ಬೆಳೆಸಿದೆ ಎಂಬುದಕ್ಕೆ ಈತನೇ ಪ್ರಮುಖ ಸಾಕ್ಷಿ ಎಂದು ಯಾದವ ಸಮುದಾಯದ ವೇದಿಕೆಯಲ್ಲೇ ಕಣ್ಣೀರಿಟ್ಟರು.

    “ಕೊರಟಗೆರೆ ಕ್ಷೇತ್ರ ಸೇರಿ ರಾಜ್ಯದ 160ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಡಿಸಿಎಂ ಆಗಿದ್ದಾರೆ. ಸಿಎಂ ಸೀಟಿಗೆ ಇನ್ನೊಂದೇ ಮೆಟ್ಟಿಲು ಬಾಕಿಯಿದೆ.  ಕೊರಟಗೆರೆಯಲ್ಲಿ ಮಾಜಿ ಶಾಸಕ ಮತ್ತೇ ಮಾಜಿನೇ ಆಗ್ತಾರೇ. ಬಿಜೆಪಿ ಪಕ್ಷದ ಅಭ್ಯರ್ಥಿ ಪರಮೇಶ್ವರ್‌ಗೆ ಯಾವತ್ತು ಸಮವಿಲ್ಲ. ಪರಮೇಶ್ವರ್ ಅವರೇ ನಮ್ಮ ಮುಂದಿನ ಸಿಎಂ”

    –ಚಂದ್ರಶೇಖರಗೌಡ. ಜಿಲ್ಲಾಧ್ಯಕ್ಷ. ತುಮಕೂರು.

     

    “ಮಧುಗಿರಿ ನನ್ನ ತವರು ಕ್ಷೇತ್ರ. ಗೊಲ್ಲ ಸಮುದಾಯ ನನ್ನ ಕೈಹಿಡಿದಿದೆ. ಕೊರಟಗೆರೆ ಕ್ಷೇತ್ರವು ನನಗೆ ಕರ್ನಾಟಕದ ಎರಡನೇ ಪ್ರಮುಖ ಸ್ಥಾನ ನೀಡಿದೆ. ದೆಹಲಿಗೆ ಹೋಗಿ ಕೊರಟಗೆರೆ ಅಂದ್ರೇ ಪರಮೇಶ್ವರ್ ಅಂತಾರೇ. ನಾನು ನಿಮ್ಮ ಶಾಸಕ ಆಗೋದಕ್ಕೆ ನನಗೇ ಅರ್ಹತೆ ಇದೇ ಅಲ್ವಾ. ಮತದಾರರ ಆಶೀರ್ವಾದಕ್ಕೆ ಪ್ರತಿಯಾಗಿ ನಾನು ಅಭಿವೃದ್ದಿಯ ಋಣ ತೀರಿಸಿದ್ದೇನೆ”

    — ಡಾ.ಜಿ.ಪರಮೇಶ್ವರ್. ಮಾಜಿ ಡಿಸಿಎಂ. ಕೊರಟಗೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ

    February 20, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    February 19, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ

    February 21, 2026

    ತುಮಕೂರು: ವಿಕಲಚೇತನರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.05ರಷ್ಟು ರಾಜಕೀಯ ಮೀಸಲಾತಿ ನೀಡಬೇಕು, ಬಜೆಟ್‌ ನಲ್ಲಿ ಹೆಚ್ಚುವರಿ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ…

    ಹತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ: ಭಕ್ತರಿಗೆ ಸಂಭ್ರಮ

    February 21, 2026

    ಸಾರ್ವಜನಿಕರ ರಸ್ತೆಗೆ ಕಾಂಪೌಂಡ್ ನಿರ್ಮಾಣ: ತೆರವಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ

    February 21, 2026

    ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಖಾಯಂಗೆ ಒತ್ತಾಯಿಸಿ ಪ್ರತಿಭಟನೆ

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.