ಜಮ್ಮು & ಕಾಶ್ಮೀರ: ಭಾಷಣ ಮಾಡುತ್ತಿರುವಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಸಿದು ಬಿದ್ದಿರುವ ಘಟನೆ ಜಮ್ಮು & ಕಾಶ್ಮೀರದ ಕಥುವಾದಲ್ಲಿ ನಡೆದಿದೆ.
ವೇದಿಕೆ ಭಾಷಣ ಮಾಡುತ್ತಿದ್ದ ಅವರ ಧ್ವನಿಯು ತೀವ್ರವಾಗಿ ಕಟ್ಟಿಕೊಂಡಿದ್ದು, ಈ ವೇಳೆ ಅವರು ಮಾತನಾಡಲು ಆಗದಷ್ಟು ಆಯಾಸ ಅನುಭವಿಸಿದರು. ಬಳಿಕ ಕೂಡಲೇ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರು ಹಾಗೂ ಖರ್ಗೆ ಅವರ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಬಂದಿದ್ದು, ಕುಡಿಯಲು ನೀರು ಕೊಟ್ಟರು. ಬಳಿಕ ಖರ್ಗೆ ಅವರು ಕುಳಿತುಕೊಂಡು ಸುಧಾರಿಸಿಕೊಂಡರು.
ಬಳಿಕ ಮತ್ತೆ ಭಾಷಣ ಮಾಡಲು ಮುಂದಾದಾಗಲೂ ತೀವ್ರ ಆಯಾಸವಾಗಿದೆ. ಸದ್ಯ ಇದೀಗ ಖರ್ಗೆಯವರ ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಬಿಜೆಪಿಗರು ಎಂದಿಗೂ ಚುನಾವಣೆ ನಡೆಸಲು ಬಯಸುವುದಿಲ್ಲ. ಆದರೆ ಅವರು ಬಯಸಿದರೆ, ಅದನ್ನು ಒಂದು ಅಥವಾ ಎರಡು ವರ್ಷಗಳಲ್ಲಿ ಮಾಡಬಹುದಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದ ನಂತರ ಅವರು ಚುನಾವಣೆಗೆ ತಯಾರಿ ಆರಂಭಿಸಿದರು. ಅವರು ಚುನಾವಣೆಯನ್ನು ಬಯಸಿರಲಿಲ್ಲ ಎಂದು ಕಿಡಿಕಾರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296