ಟಾಟಾ ಗ್ರೂಪ್ ಇಲ್ಕರ್ ಆಯ್ಸಿ ಅವರನ್ನು (ಮಾಜಿ ಟರ್ಕಿಷ್ ಏರ್‍ಲೈನ್ಸ್ ಅಧ್ಯಕ್ಷ) ಏಪ್ರಿಲ್ 1 ಅಥವಾ ಅದಕ್ಕಿಂತ ಮೊದಲು ಅನ್ವಯವಾಗುವಂತೆ ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಕಾರಿ(ಎಂಡಿ ಮತ್ತು ಸಿಇಒ) ಯಾ ನೇಮಕ ಮಾಡಿದೆ.
ಟಾಟಾ ಗ್ರೂಪ್ ಕಳೆದ ತಿಂಗಳು ಭಾರತ ಸರ್ಕಾರದಿಂದ ಸ್ವಾೀಧಿನಪಡಿಸಿಕೊಂಡ ವಿಮಾನಯಾನ ಸಂಸ್ಥೆ ಮುನ್ನೆಡೆಸಲ ಓರ್ವ ಸಾಗರದಾಚೆಯ ಮುಖ್ಯಸ್ಥರನ್ನು ನೇಮಿಸುವ ಯೋಜನೆಗಳ ಅನುಸಾರ ಈ ಬೆಳವಣಿಗೆಯಾಗಿದೆ. ಇಲ್ಕರ್ ಆಯ್ಸಿ ಅವರು 2015ರಿಂದ ಟರ್ಕಿಷ್ ಏರ್ ಲೈನ್ಸ್‍ನ ಅಧ್ಯಕ್ಷರಾಗಿದ್ದರು ಮತ್ತು ಈ ವರ್ಷದ ಜನವರಿ 27ರಂದು ಕೇಂದ್ರ ಸರ್ಕಾರವು ಟಾಟಾ ಸಮೂಹಕ್ಕೆ ಏರ್ ಇಂಡಿಯಾವನ್ನು ಹಸ್ತಾಂತರಿಸಿದ ದಿನ ಆಯ್ಸಿ ಅವರು ರಾಜೀನಾಮೆ ನೀಡಿರುವುದನ್ನು ಟರ್ಕಿಷ್ ಏರ್‍ಲೈನ್ಸ್ ಪ್ರಕಟಿಸಿದೆ.
ತಮ್ಮ ವೃತ್ತಿ ಜೀವನದ ಅವಯಲ್ಲಿ ಆಯ್ಸಿ ಅವರು ಇಸ್ತಾಂಬುಲ್‍ನ ಅಂದಿನ ಮೇಯರ್ ರೆಸೆಪ್ ತಯ್ಯಿಪ್ ಎರ್ಡೋಗಾನ್ ಅವರಿಗೆ ಇಸ್ತಾನ್‍ಬುಲ್ ಮಹಾನಗರ ಪಾಲಿಕೆಯಲ್ಲಿ ಸಲಹೆಗಾರರಾಗಿದ್ದರು. ಎರ್ಡೋಗಾನ್ ಅವರು ಟರ್ಕಿಯ ಈ ಮಹಾನಗರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರು. ಏರ್ಡೋಗಾನ್ ಅವರು ಈಗ ಟರ್ಕಿಯ ಅಧ್ಯಕ್ಷರಾಗಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB