ಮತದಾನ ಮಾಡಲು ಗಲ್ಫ್ ರಾಷ್ಟ್ರದ ಮುಸ್ಲಿಂ ಮತದಾರರಿಗೆ ಭಟ್ಕಳ ಜಮಾಯತ್ ಗಳು ಗಾಳ ಹಾಕುತ್ತಿರುವ ವಿಚಾರವೊಂದು ವರದಿಯಾಗಿದೆ.
ವಿದೇಶದಲ್ಲಿ ಇರುವ ಮುಸ್ಲಿಂ ಮತದಾರರಿಗೆ ವಿಮಾನ ಟಿಕೆಟ್ ಆಫರ್ ನೀಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ.
ಗಲ್ಫ್ ನಲ್ಲಿ ಭಟ್ಕಳದ 1250 ಕ್ಕೂ ಹೆಚ್ಚು ಮತದಾರರು ಇದ್ದಾರೆ. ಮುಸ್ಲಿಂ ಮತದಾನದ ಸಂಖ್ಯೆ ಹೆಚ್ಚಳವಾಗಬೇಕು. ಜಾತ್ಯಾತೀತ ವ್ಯಕ್ತಿಗಳು ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ಈ ಆಫರ್ ನೀಡಲಾಗುತ್ತಿದೆ ಎನ್ನಲಾಗಿದೆ.
ಜಮಾಯತ್ ಈಗಾಗಲೇ ಸೌದಿ ಅರೇಬಿಯಾದಲ್ಲಿ ತಮ್ಮ ಸದಸ್ಯರು ಮತದಾನ ಮಾಡುವಂತೆ ಮನವಿ ಮಾಡುವ ಮೂಲಕ ಪ್ರಕಟಣೆ ಹೊರಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA