ಟೆಲಿಕಾಂ ದೈತ್ಯ ಕಂಪನಿಯಾದ ಬೆಂಗಳೂರು ಸೇರಿ 12 ನಗರಗಳಲ್ಲಿ ಏರ್ ಟೆಲ್ ನಿಂದ 5ಜಿ ಸೇವೆ ಈಗಾಗಲೇ ಆರಂಭವಾಗಿದೆ.
ಏರ್ ಟೆಲ್ ಹಾಗೂ ಜಿಯೊ ಕಂಪನಿಗಳು ಪ್ರತಿದಿನ ಒಂದು ನಗರವನ್ನು 5ಜಿ ಸೇವೆಗೆ ಸೇರ್ಪಡೆಗೊಳಿಸುತ್ತಿದ್ದು, ಇದುವರೆಗೆ 12 ನಗರಗಳಲ್ಲಿ 5ಜಿ ಸೇವೆ ಆರಂಭಗೊಂಡಿದೆ.
ಬೆಂಗಳೂರು, ದೆಹಲಿ, ಸಿಲುಗುರಿ, ಹೈದರಾಬಾದ್, ವರಣಾಸಿ, ಮುಂಬೈ, ನಾಗ್ಪುರ್, ಚೆನ್ನೈ, ಗುರ್ ಗಾಂವ್, ಪಾಣಿಪತ್, ಗುವಾಹತಿ ನಗರಗಳಲ್ಲಿ ಈಗಾಗಲೇ 5ಜಿ ಸೇವೆ ಲಭ್ಯವಾಗಿದೆ.
ಬಿಹಾರದ ಪಾಟ್ನಾದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ 5ಜಿ ಸೇವೆ ಲಭ್ಯವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಇನ್ನೂ ಲಭ್ಯವಾಗಿಲ್ಲ.
ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ಧಾಣ, ಪೂನಾದ ಲೊಹೆಂಗೆ ವಿಮಾನ ನಿಲ್ದಾಣ, ವಾರಣಾಸಿ ಲಾಲ್ ಬಹದ್ದೂರ್ ಶಾಸ್ತ್ರಿ, ನಾಗ್ಪುರ ಬಾಬಾ ಸಾಹೇಬ್ ಅಂಬೇಡ್ಕರ್ ವಿಮಾನ ನಿಲ್ದಾಣ ಮತ್ತು ಪಾಟ್ನಾ ವಿಮಾನ ನಿಲ್ದಾಣಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz