ಏರ್ ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಇದರಿಂದಾಗಿ ಗ್ರಾಹಕರು ಪರದಾಡಿದ ಘಟನೆ ನಡೆದಿದೆ. ತಾಂತ್ರಿಕ ಅಡಚಣೆಯ ಹಿನ್ನೆಲೆಯಲ್ಲಿ ಏರ್ ಟೆಲ್ ಗ್ರಾಹಕರ ಬಳಿಕ ಕ್ಷಮೆಯಾಚಿಸಿದೆ.
ಏರ್ ಟೆಲ್ ನ ಸೇವೆಯಲ್ಲಿ ಹಲವೆಡೆ ಸೇವಾ ಅಡೆತಡೆಗಳು ಉಂಟಾಗಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಏರ್ ಟೆಲ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ನಿಮ್ಮ ಏರ್ ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಸೇವೆಗಳಲ್ಲಿ ನೀವು ಅಡಚಣೆಯನ್ನು ಅನುಭವಿಸಬಹುದು. ನಿಮ್ಮ ಸೇವೆಗಳನ್ನು ಪುನರಾರಂಭಿಸಲು ನಿರೀಕ್ಷಿತ ಸಮಯ 10 ನವೆಂಬರ್ 2022, 5:44 PM ಆಗಿದೆ. ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಏರ್ ಟೆಲ್ ಹೇಳಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


