ಸುಳ್ಯ: ದೇವರ ಕಾನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 14ರಂದು ಪ್ರತಿಭಾ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಅಂಗಾರ, ಎ.ವಿ.ತೀರ್ಥರಾಮ, ಬಾಲಕೃಷ್ಣ ಕೀಲಾಡಿ, ನವೀನ್ ಸಾರಕೆರೆ ಮತ್ತು ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನ್ ಡೆವಲಪ್ಮೆಂಟ್ ಸೊಸೈಟಿ ರಿಜಿಸ್ಟರ್ಡ್ ಮತ್ತು “ಶ್ರೀರಾಮ ಗೋಶಾಲೆ” ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂಸ್ಥೆಯಿಂದ ದಿನನಿತ್ಯ ಉಚಿತ ಸಂಜೆ ಪಾಠ ಶಾಲೆ ನಡೆಸುವ ಮೂಲಕ ಮಾದರಿಯಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳಿಗೆ 50 ಪ್ರಮಾಣ ಪತ್ರ, 50 ಪುಸ್ತಕ , 50 ಹಣ್ಣಿನ ಗಿಡಗಳನ್ನು ನೀಡುವ ಮೂಲಕ ಶಿಕ್ಷಕಿಯಾದ ಸಂಪ್ರೀತ ಅವರಿಗೆ ಸನ್ಮಾನವನ್ನು ಮಾಡಿದರು

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರದೀಪ್, ಹೆಚ್ಚು ಕಾರ್ಯದರ್ಶಿಯಾದ ಮಹಾಂತೇಶ್ ಡಿ., ದಕ್ಷಿಣ ಕನ್ನಡ ಜಿಲ್ಲೆಯ ಸಂಚಾಲಕರಾದ ಮಂಜುನಾಥ್, ಶ್ರೀರಾಮ ಗೋಶಾಲೆಯ ಅಧ್ಯಕ್ಷರಾದ ಸೋಮಪ್ರಸಾದ್ ರೈ, ಕಾರ್ಯದರ್ಶಿಗಳಾದ ಚಂದ್ರಶೇಖರ್ ಮೇಣಾಲ ಮತ್ತು ಪದಾಧಿಕಾರಿಗಳು ಮತ್ತು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


