ಸುಪ್ರೀಂಕೋರ್ಟ್ & ಹೈಕೋರ್ಟ್‌ನ ನ್ಯಾಯಮೂರ್ತಿಗಳ ವಲಯದಲ್ಲಿ ‘ಅಜಾತಶತ್ರು’ ಎಂದೇ ಹೆಸರಾಗಿದ್ದ ನ್ಯಾಯಮೂರ್ತಿ ನಾಗನಾಥ ಕಂಟೆಪ್ಪ ಪಾಟೀಲ್(70) ಅವರು ಸೋಮವಾರ ಹೈದರಾಬಾದಿನಲ್ಲಿ ನಿಧನರಾದರು.
ಅವರು ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿಯ ನಿಡೆಬಾನ್ ಗ್ರಾಮದವರಾಗಿದ್ದಾರೆ. ಕಲಬುರಗಿ & ಧಾರವಾಡದ ಹೈಕೋರ್ಟ್ ಪೀಠಗಳ ಕಟ್ಟಡ & ಕಾರ್ಯಾರಂಭಕ್ಕೆ ಇವರ ಕೊಡುಗೆ ಅನನ್ಯವಾಗಿದೆ.
ಇಂದು(ಡಿ. ೧೨) ಸಂಜೆ ಬೆಂಗಳೂರಿನ ಹೆಬ್ಬಾಳದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.


