ಕೊರಟಗೆರೆ: ಗ್ರಾಮ ಪಂಚಾಯಿತಿಯೊಂದರ ಕರವಸೂಲಿ ಮಾಡುವ ಬಿಲ್ ಕಲೆಕ್ಟರ್ 1.5ಲಕ್ಷ ಹಣ ದುರುಪಯೋಗ ಹಾಗೂ ನರೇಗಾ (ಎನ್ ಆರ್ ಇ ಜಿ ಎ) ಕಂಪ್ಯೂಟರ್ ಆಪರೇಟರ್ ಕರ್ತವ್ಯ ಲೋಪವೆಸಿಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿರುವ ಘಟನೆಯೊಂದು ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಡಿಸೆಂಬರ್ 11ರ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಂಜುನಮ್ಮ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಂಚಾಯತಿಯ ಕಂದಾಯ ವಸೂಲಿಗಾರ ಅಂಜನಪ್ಪ ಹಾಗೂ ನರೇಗಾ ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಹೆಚ್.ಎಂ ಎಂಬುವರನ್ನು ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗ ಕಾರಣಗೊಂಡಿ, ಇಬ್ಬರು ನೌಕರರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಕ್ಕಿರಾಂಪುರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಸೂಚನೆ ಸಂಖ್ಯೆ ಏಳರ ಅಡಿಯಲ್ಲಿ ಗ್ರಾಮ ಪಂಚಾಯಿತಿ ಕಂದಾಯ ವಸೂಲಿದಾರ ಅಂಜಿನಪ್ಪ ಎಂಬುವರನ್ನು ಸಾಮಾನ್ಯ ಸಭೆಯಲ್ಲಿ ಲೆಕ್ಕಪತ್ರ ವಿಚಾರಿಸಿದ ಸಂದರ್ಭದಲ್ಲಿ ಸಮರ್ಪಕವಾಗಿ ಉತ್ತರ ಕೊಡದೆ ನುಸುಳಿಕೊಂಡು ಹೋಗುತ್ತಿದ್ದಂತಹ ಸಂದರ್ಭದಲ್ಲಿ, ಮೇಲ್ನೋಟಕ್ಕೆ ಲೋಪ ಕಂಡುಬಂದ ಕಾರಣ ಕುಲಂಕುಶವಾಗಿ ಲೆಕ್ಕಪತ್ರ ವಿಚಾರಿಸಿದಾಗ 1.5 ಲಕ್ಷ ಹಣ ದುರುಪಯೋಗವಾಗಿರುವುದರ ಬಗ್ಗೆ ಕಂಡುಬಂದ ತಕ್ಷಣ ಸಭೆಯಲ್ಲಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕರ ವಸೂಲಿಗಾರ ಅಂಜಿನಪ್ಪ ಮೊದಲಿನಿಂದಲೂ ಗ್ರಾಮ ಪಂಚಾಯಿತಿಯಲ್ಲಿ ಸಮರ್ಪಕವಾಗಿ ಕರವಸೂಲಾತಿಯ ಹಣವನ್ನ ಗ್ರಾಮ ಪಂಚಾಯಿತಿಯ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿಲ್ಲ ಎಂಬ ಆರೋಪದ ಮೇಲೆ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅಂಗಡಿ ಮಳಿಗೆಗಳ ಮತ್ತು ಸಂತೆ ಮತ್ತು ವಾಹನಗಳ ಸುಂಕ ಮತ್ತು ಕಂದಾಯ ವಸೂಲಾತಿ ಹಣ ಕಳೆದ ಮೂರು ತಿಂಗಳಿನಿಂದ 1.5 ಲಕ್ಷ ಹಣವನ್ನು ಬ್ಯಾಂಕಿಗೆ ಜಮಗೊಳಿಸದೆ ತಾನೇ ಬಳಸಿಕೊಂಡಿರುವುದು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅಂಜನಪ್ಪನವರನ್ನು ತತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಂಜನಪ್ಪನವರ ಮೂರು ತಿಂಗಳ ಸುಂಕ ವಸೂಲಿ ಹಾಗೂ ಕರ ವಸೂಲತಿಯಲ್ಲಿ ಕೇವಲ 3 ತಿಂಗಳಲ್ಲಿಯೇ 3 ಲಕ್ಷ ಹಣ ದುರುಪಯೋಗ ಕಂಡು ಬಂದರೆ ಸುಮಾರು ವರ್ಷಗಳಿಂದ ಕೆಲಸ ಮಾಡಿರುವ ಇವರು ಗ್ರಾಮ ಪಂಚಾಯಿತಿಗೆ ಇನ್ನೆಷ್ಟು ಹಣ ದುರುಪಯೋಗ ಪಡಿಸಿಕೊಂಡಿರಬಹುದು ಎಂದು ಸದಸ್ಯರ ವಾದವಾಗಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಸಹ ತಾಲೂಕು ಪಂಚಾಯತ ಜಿಲ್ಲಾ ಪಂಚಾಯಿತಿಯನ್ನ ಒತ್ತಾಯಿಸಿದ್ದಾರೆ.
ಉಳಿದಂತೆ ನರೇಗಾ (ಎನ್ ಆರ್ ಇ ಜಿ ಎ) ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಎಚ್ ಎಂ ಎಂಬುವರನ್ನು ಸಹ ವಿಷಯ ಸೂಚಿ ಸಂಖ್ಯೆ 7ಅನ್ವಯ ಗ್ರಾಮ ಪಂಚಾಯಿತಿಯ ಕಚೇರಿ ಕರ್ತವ್ಯ ನಿರ್ಲಕ್ಷತೆ ಆದರಿಸಿ ಗ್ರಾಮ ಪಂಚಾಯಿತಿ ಸದಸ್ಯಗಳ ಸರ್ವಾನುಮತದ ಅಭಿಪ್ರಾಯದ ಮೇಲೆ ತತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನರೇಗಾ ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಹೆಚ್.ಎಂ ಗ್ರಾಮ ಪಂಚಾಯಿತಿಗೆ ಅನಾದಿಕೃತವಾಗಿ ಗೈರು ಹಾಜರಿ, ಸಾರ್ವಜನಿಕರಿಗೆ ಸ್ಪಂದನೆ ಮಾಡದಿರುವುದು, ನರೇಗಾ ಯೋಜನೆ ಎಂ ಜಿ ಎನ್ ಆರ್ ಇ ಜಿ ಎ ಯೋಜನೆ ಅಡಿ ವೈಯಕ್ತಿಕ ಫಲಾನುಭವಿಗಳಿಗೆ ಎನ್.ಎಂ.ಆರ್ ಸೃಜನ ಮಾಡದಿರುವುದು, ವಸತಿ ಯೋಜನೆಗಳ ಜಿಪಿಎಸ್ ಗಳನ್ನು ಸರಿಯಾಗಿ ಕ್ರಮವಹಿಸಿ ಮಾಡದೆ ತಪ್ಪಾಗಿ ಜಿಪಿಎಸ್ ಮಾಡಿ ಸುಮಾರು ಐದು ಮನೆಗಳ ತಾಂತ್ರಿಕ ತೊಂದರೆಯನ್ನಾಗಿ ಅನುಮೋದನೆ ಗೊಳಿಸದಿರುವುದು, ಕಚೇರಿ ಕರ್ತವ್ಯಕ್ಕೆ ಹಾಜರಾಗಿ ತದನಂತರ ಅಧ್ಯಕ್ಷರ ಮತ್ತು ಮೇಲಧಿಕಾರಿಗಳ ಗಮನಕ್ಕೆ ಬಾರದೆ ಕಚೇರಿ ಬಿಟ್ಟು ಹೋಗುವುದು ಕರೆ ಸ್ವೀಕರಿಸದೆ ಸ್ವಿಚ್ ಆಫ್ ಮಾಡುವುದು, ಇವರ ಕರ್ತವ್ಯ ಲೋಕದಿಂದ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಗೆ ಸಮರ್ಪಕ ಕೆಲಸವಾಗದಿರುವ ಕಾರಣ ಬೇಸತ್ತು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಒಟ್ಟಾರೆ ಅಕ್ಕಿರಾಂಪುರ ಗ್ರಾಮ ಪಂಚಾಯಿತಿ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದು, ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಕರ್ತವ್ಯ ನಿರ್ಲಕ್ಷ ವಹಿಸುತ್ತಿರುವ ನೌಕರರ ವಿರುದ್ಧ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಹಾಗೂ ಸದಸ್ಯರ ಹಕ್ಕು ಬಾಧ್ಯತೆ ಅಡಿಯಲ್ಲಿ ನೌಕರರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿರುವುದು ಇತರ ಗ್ರಾಮ ಪಂಚಾಯಿತಿ ನೌಕರರಿಗೆ ಎಚ್ಚರಿಕೆಯ ಗಂಟೆಯಾದಂತ್ತಾಗಿದೆ…
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.


