ಪಾವಗಡ: ವೈದ್ಯಕೀಯ ದೃಢೀಕರಣ ಹಾಗೂ ಪರವಾನಗಿ ರಹಿತವಾಗಿ ಸಾಗಿಸುತ್ತಿದ್ದ 8 ಎಮ್ಮೆ ಕರುಗಳನ್ನು ಪಾವಗಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಗುಡಿಬಂಡೆ ಸಂತೆಯಿಂದ ಪೆನುಕೊಂಡ ಕಡೆಗೆ ಬೊಲೆರೋ ವಾಹನದಲ್ಲಿ ಎಮ್ಮೆ ಕರುಗಳನ್ನು ಸಾಗಿಸಲಾಗುತ್ತಿತ್ತು.
8ಎಮ್ಮೆ ಕರುಗಳು ಸಾಗಾಟ ಮಾಡುತಿದ್ದ ಖಚಿತ ಮಾಹಿತಿ ಮೇರೆಗೆ ಬಜರಂಗದಳದ ಜಿಲ್ಲಾ ಸಹ ಸಂಯೋಜಕ್ ಸುಮನ್ ತಾಲೂಕು ಸಂಯೋಜಕ್ ವಾಸು ಗೋರಕ್ಷ ಪ್ರಮುಖ್ ರಾಕೇಶ್ ಸುರಕ್ಷಾ ಪ್ರಮುಖ್ ರವಿ, ಹರ್ಷ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಜರಂಗದಳದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಎಮ್ಮೆ ಕರುಗಳನ್ನು ವಶಪಡಿಸಿಕೊಂಡು ಗೋ ಹತ್ಯೆ ನಿಷೇಧ ಕಾನೂನಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy