ತುಮಕೂರು: ಕಲ್ಪತರು ನಾಡು ತುಮಕೂರಿನ ಪಾರಂಪರಿಕ ತಾಣ ಆಲದ ಮರದ ಪಾರ್ಕ್ನಲ್ಲಿ ಅಮೋಘ ಟಿವಿ, ಫಿಟ್ ಲೋನಿಕ್ ಸಹಯೋಗದಲ್ಲಿ ಪ್ರೆಸ್ ಕ್ಲಬ್ ತುಮಕೂರು ವತಿಯಿಂದ ಯೋಗಾ ಡೇ ಆಚರಿಸಲಾಯಿತು.
ಶಾಸಕ ಜ್ಯೋತಿಗಣೇಶ್, ತುಮಕೂರು ತಹಶೀಲ್ದಾರ್ ಮೋಹನ್ ಕುಮಾರ್, ಪಾಲಿಕೆ ಸದಸ್ಯೆ ಗಿರಿಜಾ ದನಿಯಾಕುಮಾರ್ ಸೇರಿದಂತೆ ಹಲವು ಗಣ್ಯರು ಯೋಗಾ ಡೇನಲ್ಲಿ ಭಾಗವಹಿಸಿದ್ದರು.
ಪ್ರೆಸ್ಕ್ಲಬ್ ತುಮಕೂರಿನ ಉಪಾಧ್ಯಕ್ಷರಾದ ಶ್ರೀನಿವಾಸ್, ಸಹ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ದಾದಾಫೀರ್ ಸೇರಿದಂತೆ ಪದಾಧಿಕಾರಿಗಳು ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ನಾಗರಿಕರು, ಯೋಗಾಪಟುಗಳು ಯೋಗಾಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಯೋಗ ದಿನದ ಪ್ರಾಮುಖ್ಯತೆ ತಿಳಿಸಿದರಲ್ಲದೆ, ಆಲದಮರದ ಪಾರ್ಕ್ ಅನ್ನು ಪ್ರೆಸ್ ಕ್ಲಬ್ ಅವರಿಗೆ ನೀಡಿದ ನಂತರ ಉತ್ತಮ ಕಾರ್ಯಗಳು ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz