ಇದೀಗ ಮುಂದಿನ ದಿನದಲ್ಲಿ ಸತ್ತವರನ್ನು ಸಹ ಮತ್ತೆ ಬದುಕಿಸಬಹುದು ಎಂದು ಕಂಪನಿಯೊಂದು ಆಶ್ವಾಸನೆ ಕೊಟ್ಟಿದೆ ನೋಡಿ. ಅಮೇರಿಕನ್ ಕಂಪನಿ “Alcor Life Extension Foundation” ವಿಶ್ವದ ಅಗ್ರ ಕ್ರಯೋನಿಕ್ಸ್ ಕಂಪನಿ ಇದನ್ನು ಹೇಳಿದ್ದು, ಸತ್ತವರನ್ನು ಬದುಕಿಸುವ ಉದ್ದೇಶದಿಂದ ಈ ಸಂಸ್ಥೆ ಶವಗಳನ್ನು ಸಂರಕ್ಷಿಸಿ ಇಟ್ಟುಕೊಂಡಿದೆ.
ಅಲ್ಕೋರ್ ಕಂಪನಿ ಈಗಾಗಲೇ 233 ದೇಹಗಳನ್ನು ಪಡೆದುಕೊಂಡಿದೆ. ವೈದ್ಯಕೀಯ ವಿಜ್ಞಾನವು ಅಭಿವೃದ್ಧಿ ಹೊಂದಿದ ದಿನದಲ್ಲಿ ಈಗಾಗಲೇ ಸಂರಕ್ಷಿಟ್ಟಿರು ಶವಗಳನ್ನು ಮತ್ತೆ ಜೀವಕ್ಕೆ ತರುವ ಭರವಸೆಯಲ್ಲಿ ಕೆಲಸ ನಡೆಸುತ್ತಿದೆ.
ಅಲ್ಕೋರ್ ಬಳಸುವ ವಿಜ್ಞಾನವನ್ನು “ಕ್ರಯೋನಿಕ್ಸ್” ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಮಾನವ ದೇಹಗಳನ್ನು ಫ್ರೀಜರ್ನಲ್ಲಿ ಕಡಿಮೆ ತಾಪಮಾನದಲ್ಲಿ ಸಂರಕ್ಷಿಸಿಡಲಾಗುತ್ತದೆ. ನಂತರ, ಚಿಕಿತ್ಸೆ ಮೂಲಕ ಈ ಶವಗಳಿಗೆ ಜೀವ ತುಂಬುವ ಕೆಲಸ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮೂಲಕ ಮನುಷ್ಯರ ಜೀವಿತಾವಧಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA