ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಅಲೆಮಾರಿ ಮತ್ತು ಅರೆ ಅಲೆಮಾರಿಗಳಗೆ ಸರ್ಕಾರದಿಂದ ಸಿಗಬೇಕಾದಂತಹ ಮೂಲ ಸೂಕ್ತ ಸೌಲಭ್ಯಗಳು ಇತ್ತೀಚಿನ ದಿನಗಳಲ್ಲಿ ಸಿಗುತ್ತಿಲ್ಲ. ತಕ್ಷಣವೇ ಸೌಲಭ್ಯಗಳನ್ನು ಒದಗಿಸಬೇಕು ಎಂದು ದೊಂಬಿದಾಸರ ಯುವ ಸೇನೆ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷರಾದ ಎಸ್.ಆರ್. ಇಂದಿರಾಗುರುಸ್ವಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ, ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕು ವಸತಿ ರಹಿತ ಕುಟುಂಬಗಳಿಗೆ ವಸತಿ ಕಲ್ಪಿಸಬೇಕು. ಅಲೆಮಾರಿ ಜನಾಂಗದವರಿಗೆ ಮೂರು ವರ್ಷದಿಂದ ಸಾಲ ನೀಡಿರುವುದಿಲ್ಲ, ಈ ಕೂಡಲೇ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ನೀಡಬೇಕು. ಈಗಾಗಲೇ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸಾಲ ಮತ್ತು ಸಹಾಯಧನವನ್ನು ನೀಡಬೇಕು. ಗುಡಾರ ಮತ್ತು ಗುಡಿಸಲು ಮುಕ್ತ ಅಲೆಮಾರಿ ಕಾಲೋನಿಗಳನ್ನು ಮಾಡಬೇಕು. ಅಲೆಮಾರಿಗಳಿಗೆ ಗಂಗಾಕಲ್ಯಾಣ ಅಡಿಯಲ್ಲಿ ಬೋರ್ವೆಲ್ ಕೋರೆಸಿಕೊಡಬೇಕು. ಅಲೆಮಾರಿ, ಅರೆ ಅಲೆಮಾರಿ ಮಹಿಳಾ ಸಂಘಗಳಿಗೆ ಗುಂಪು ಸಾಲಗಳನ್ನು ನೀಡಬೇಕು ಹಾಗೂ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಕೌಶಲ್ಯ ಅಭಿವೃದ್ಧಿಯಲ್ಲಿ ಬರುವ ಉಪಕರಣಗಳನ್ನು (ಟೈಲರಿಂಗ್ ಮತ್ತು ಇತರೆ) ದೊರಕಿಸಿಕೊಡಬೇಕು. ಸ್ವಯಂ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.
ಮಹಾಲಿಂಗಪ್ಪ ಯಾದವ್ ಮಾತನಾಡಿದರು. ಅಲೆಮಾರಿ ಅರೆ ಅಲೆಮಾರಿ ಮಹಿಳೆಯರ ಪರಿಸ್ಥಿತಿಯನ್ನು ಮಾರಕ್ಕನವರು ತಿಳಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸರ ಯುವ ಸೇನೆ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷರಾದ ಎಸ್.ಆರ್.ಇಂದಿರಾಗುರುಸ್ವಾಮಿ ಹಾಗೂ ಓಬಳೇಶ್ ವಕೀಲರು ಹೇಮರೆಡ್ಡಿ, ಅಖಂಡ ಕರ್ನಾಟಕ ರೈತ ಸಂಘ ಅಧ್ಯಕ್ಷರು ಹಾಗೂ ನಿಂಗರಾಜ್ ಸಿದ್ದಮ್ಮನಹಳ್ಳಿ ದೊಂಬಿದಾಸರ,ನಾಗಪ್ಪ, ಶಿವಕುಮಾರ ಹಿರೇಮಲ್ಲನಹೊಳೆ, ನಾಗರಾಜ್ ಚಿಕ್ಕ ಮಲ್ಲನ ಹೊಳೆ, ಶಿವಕುಮಾರ್, ಮಹಾಲಿಂಗಪ್ಪ, ಯಾದವ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್.ಹಿರಿಯೂರು ( ಚಿತ್ರದುರ್ಗ– ದಾವಣಗೆರೆ)
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB