ರಾಜ್ಯಾದ್ಯಂತ 202 ಡಯಾಲಿಸಿಸ್ ಕೇಂದ್ರಗಳಿದ್ದು, ನವೆಂಬರ್ 30 ರಿಂದ ಸಂಪೂರ್ಣ ಕೆಲಸ ನಿಲ್ಲಿಸಲಿವೆ. ಕೊರೊನಾದ ಕಾರಣ ಹೇಳಿ ಸರ್ಕಾರ ಡಯಾಲಿಸಿಸ್ ಸಿಬ್ಬಂದಿಗಳ ಸಂಬಳಕ್ಕೆ ಕತ್ತರಿ ಹಾಕಿದ್ದು, ಕಳೆದೆರಡು ವರ್ಷಗಳಿಂದ ಅರ್ಧ ಸಂಬಳ ಪಡೆದು ಕೆಲಸ ಮಾಡುತ್ತಿದ್ದಾರೆ.
ಇದಲ್ಲದೆ ಕಳೆದ ಎರಡು ತಿಂಗಳುಗಳಿಂದ ಸಂಬಳವನ್ನು ಹೋಲ್ಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಪರದಾಡುವಂತಾಗಿದೆ. ರಾಜ್ಯ ಸರ್ಕಾರದ ಈ ನಡೆಯ ವಿರುದ್ದ ಪ್ರತಿಭಟನೆಗೆ ನಡೆಸಲಿದ್ದು, ನ.30ರಿಂದ ಡಯಾಲಿಸಿಸ್ ಕೇಂದ್ರಗಳು ಮುಚ್ಚಲಿವೆ.


