ತುಮಕೂರು: ಟೀಮ್ ಇಂಡಿಯಾ ಗೆಲುವಿಗಾಗಿ ತುಮಕೂರಿನಲ್ಲಿ ವಿನೂತನವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳ ದೇವಾಲಯಗಳಲ್ಲಿ ಭಾವೈಕ್ಯತೆಯ ಪ್ರಾರ್ಥನೆ ನಡೆಸಲಾಯಿತು.
ಸರ್ವಧರ್ಮ ಸಮಾನತೆಯಿಂದ ಭಾರತದ ಗೆಲುವಿಗೆ ಪ್ರಾರ್ಥನೆ ನಡೆಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಸೇನೆ ವತಿಯಿಂದ ವಿನೂತನ ಪ್ರಾರ್ಥನೆ ತುಮಕೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದದಲ್ಲಿ ನಡೆಯಿತು. ತೆಂಗಿನಕಾಯಿ ಹೊಡೆದು ಗೆಲುವಿಗೆ ಪೂಜೆ ಸಲ್ಲಿಸಲಾಯಿತು.
ಟೌನ್ ಹಾಲ್ ಬಳಿಯ ಜೋಡಿ ಮಜಾರ್ ದರ್ಗಾದಲ್ಲಿ ಧುವಾ ನಡೆಯಿತು. ಚರ್ಚ್ ಸರ್ಕಲ್ ಬಳಿಯ ಸಿ.ಎಸ್.ಐ ವೆಸ್ಲಿ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಚಾಂಪಿಯನ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ದರ್ಗಾದಲ್ಲಿ ಧುವಾ ಬಳಿಕ ಸಿಹಿ ಹಂಚಲಾಯಿತು. ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹೀಡುಗಾಯಿ ಹೊಡೆದ ಕಾರ್ಯಕರ್ತರು, ಭಾರತ ಗೆದ್ದೇ ಗೆಲ್ಲಲಿ ಎಂದು ಘೋಷಣೆ ಕೂಗಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4