ಬೀದರ್: ಜಿಲ್ಲೆಯ ಹುಲಸೂರಿನಲ್ಲಿ ಪತ್ರಕರ್ತರೆಂದು ಹೇಳಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಹುಲಸೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬೇಲೂರು ಗ್ರಾಮದ ನಿವಾಸಿ ಸುಧಾಕರ ಸೂಯ೯ವಂಶಿ ಹಾಗೂ ಬೇಟಬಾಲಕುಂದಾ ಗ್ರಾಮದ ನಿವಾಸಿ ವಿಶ್ವನಾಥ ಸಂಗಪ್ಪ ಕರಸಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪತ್ರಕರ್ತರ ಹೆಸರಿನಲ್ಲಿ ಬೆದರಿಕೆ ಆರೋಪ ಇಬ್ಬರ ವಿರುದ್ಧ ಹುಲಸೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌರ್ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಪತ್ರಕರ್ತರ ಹೆಸರಿನಲ್ಲಿ ಈ ಇಬ್ಬರು ಆರೋಪಿಗಳು ಶಾಲೆಯ ದೃಶ್ಯವನ್ನು ಸೆರೆ ಹಿಡಿದು ಹಾಗೂ ಪೋಟೊ ತೆಗೆದು ಶಿಕ್ಷಕರಿಗೆ ಹೆದರಿಸುತ್ತಿದ್ದರು. ಶಾಲೆಯ ಸುರಕ್ಷಿತೆ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಶಿಕ್ಷಕ ಸುಧಾಕರ ಮಹೇಂದ್ರಕರ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಆರೋಪಿತರು ಬೇಲೂರು ಗೌರ್ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಾವು ಪತ್ರಕರ್ತರೆಂದು ಹೇಳಿ ಜನರಿಗೆ ಹೆದರಿಸಿ ಸಮಾಜದಲ್ಲಿ ಶಾಂತಿಗೆ ಭಂಗ ತರುವಂತಹ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪತ್ರಕರ್ತರ ಹೆಸರಿನಲ್ಲಿ ನಮ್ಮ ಶಾಲೆಗೆ ಬಂದು ನನಗೆ ಮನಬಂದಂತೆ ಮಾತನಾಡಿ, ಮಾನಸಿಕವಾಗಿ ಹಿಂಸೆ ನೀಡಿದ್ದಲ್ಲದೇ ಏರು ಧ್ವನಿಯಲ್ಲಿ ನಾವು ಮೀಡಿಯಾದವರು ನೀವು ಎಲ್ಲಿದ್ದಿರಿ ನಿಮ್ಮ ಜತೆ ಮಾತನಾಡುವುದು ಇದೆ ಎಂದು ಅವಾಜ್ ಹಾಕಿದ್ದಾರೆ. ಈ ಇಬ್ಬರ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯ ಶಿಕ್ಷಕ ಸುಧಾಕರ ಮಹೇಂದ್ರಕರ್ ಹುಲಸೂರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


