ತಮಿಳುನಾಡಿನ ನಟ ಮತ್ತು ತಮಿಳಗಂ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ವಿರುದ್ಧ ಕೇಸ್ ದಾಖಲಾಗಿದ್ದು, ನಿಯಮ ಉಲ್ಲಂಘಿಸಿ ಮತದಾನದ ದಿನ ಜನಸಂದಣಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಜನರು ಗುಂಪುಗುಂಪಾಗಿ ಮತಗಟ್ಟೆಗೆ ಬಂದು ಜನರಿಗೆ ತೊಂದರೆ ಕೊಡುತ್ತಾರೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಅವರು ಸ್ವೀಕರಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ವಿಜಯ್ ಅವರು ಚೆನ್ನೈನ ನೀಲಂಗರರೈ ಮತಗಟ್ಟೆಗೆ ಮತ ಹಾಕಲು ಬಂದಾಗ 200ಕ್ಕೂ ಹೆಚ್ಚು ಜನರನ್ನು ತನ್ನೊಂದಿಗೆ ಕರೆತಂದು ಸಾರ್ವಜನಿಕರಿಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ವಿಜಯ್ ಮತ ಚಲಾಯಿಸಲು ಆಗಮಿಸಿದ ವೇಳೆ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಮತಗಟ್ಟೆಗೆ ನುಗ್ಗಿದರು. ನಂತರ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296