ಅಮೆಜಾನ್ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಜನೆ ರೂಪಿಸಿರುವ ಸುದ್ದಿ ಬಹಿರಂಗವಾಗಿದೆ. ಕಾರ್ಪೋರೆಟ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಈ ವಾರದಿಂದಲೇ ಸಿಬ್ಬಂದಿ ಕಡಿತ ಮಾಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸಿಬ್ಬಂದಿ ಕಡಿತದ ಕುರಿತಾಗಿ ಅಮೆಜಾನ್ ಪ್ರತಿಕ್ರಿಯೆ ನೀಡಿಲ್ಲ, ಕಂಪನಿ ತನ್ನ ಅಧೀನದಲ್ಲಿರುವ ವಿವಿಧ ವಲಯಗಳ ಸಿಬ್ಬಂದಿ ಕಡಿತ ಮಾಡಲು ನಿರ್ಧರಿಸಿದೆಯಂತೆ.
ಕಳೆದ ಡಿಸೆಂಬರ್ 31ರ ವೇಳೆಗೆ ಅಮೆಜಾನ್‌ನಲ್ಲಿ 1.68 ಲಕ್ಷ ಮಂದಿ ಅರೆಕಾಲಿಕ ಉದ್ಯೋಗಿಗಳಾಗಿದ್ದರು. ಈಗ ವಾಯ್ಸ್‌ಅಸಿಸ್ಟೆಂಟ್ ಅಲೆಕ್ಸಾ, ರೀಟೇಲ್‌ವಿಭಾಗ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.ಅಮೆಜಾನ್ ಅಧ್ಯಕ್ಷ ಜೆಫ್‌ಬೆಜೋಸ್‌ತಮ್ಮ ಒಟ್ಟು ಆಸ್ತಿಯಾದ 10 ಲಕ್ಷ ಕೋಟಿ ಪೈಕಿ ಬಹುತೇಕ ಆಸ್ತಿಯನ್ನು ಜೀವಿತಾವಧಿಯಲ್ಲಿ ದಾನ ಮಾಡುವುದಾಗಿ ಸಿಎನ್‌ಎನ್‌ಗೆ ಮಾಹಿತಿ ನೀಡಿದ ದಿನವೇ ಹುದ್ದೆ ಕಡಿತದ ಸುದ್ದಿ ಪ್ರಕಟವಾಗಿದೆ.
ಅಮೆರಿಕ ಮತ್ತೊಂದು ವಿಶ್ವವಿಖ್ಯಾತ ಕಂಪನಿ ಡಿಸ್ನಿ ಸಿಬ್ಬಂದಿ ಕಡಿತಕ್ಕೆ ಯೋಜಿಸಿದೆ. ಕಂಪನಿಯ ಸ್ಟ್ರೀಮಿಂಗ್ ಸೇವೆ ಕಳೆದ ತ್ರೈಮಾಸಿಕದಲ್ಲಿ 12,000 ಕೋಟಿ ರೂ. ನಷ್ಟ ಅನುಭವಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ದ್ವಿಗುಣ. ಹಾಗಾಗಿ ವೆಚ್ಚ ಕಡಿತಕ್ಕಾಗಿ ಸಿಬ್ಬಂದಿ ಕಡಿತ ಮಾಡಲಾಗುವುದು ಎಂದು ಸಿಇಒ ಬಾಬ್ ಚಪಾಕ್‌ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz