ಅನಂತ್ ಅಂಬಾನಿ ತಮ್ಮ ಮದುವೆಯ ಕಾರಣದಿಂದ ಕಳೆದ ಒಂದು ವರ್ಷದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಇದೇ ತಿಂಗಳ 12ರಂದು ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ವಿವಾಹವಾಗಲಿದ್ದಾರೆ. ಈ ನಡುವೆ ಇದೀಗ ಅನಂತ್ ಅಂಬಾನಿ ಅವರ ಸಂಗ್ರಹದಲ್ಲಿರುವ ದುಬಾರಿ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ.
ಅನಂತ್ ಅಂಬಾನಿ ಗ್ರ್ಯಾಂಡ್ ಮಾಸ್ಟರ್ ಚೈಮ್ ಸೇರಿದಂತೆ ಪಾಟೆಕ್ ಫಿಲಿಪ್ ಅವರ ಅತ್ಯಂತ ದುಬಾರಿ ಕೈಗಡಿಯಾರಗಳಲ್ಲಿ ಎರಡನ್ನು ಹೊಂದಿದ್ದಾರೆ. ಪಾಟೆಕ್ ನ ಅತ್ಯಂತ ದುಬಾರಿ ಕೈಗಡಿಯಾರ ಇದಾಗಿದೆ. ಇದುವರೆಗೆ ಇದರ ಏಳು ವಾಚ್‌ಗಳನ್ನು ಮಾತ್ರ ಮಾಡಲಾಗಿದೆ. ಇದು ಇತ್ತೀಚೆಗೆ ಹರಾಜಿನಲ್ಲಿ 31 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 2.58 ಬಿಲಿಯನ್ ರೂ.ಗಳಾಗಿದೆ.
ಪಾಟೆಕ್ ಫಿಲಿಪ್ ವಾಚ್ ನ ಅತ್ಯಂತ ಅಪರೂಪದ ವಾಚ್ ಇದಾಗಿದ್ದು, ಮಾಣಿಕ್ಯ, ವಜ್ರ ಬಿಳಿ ಚಿನ್ನವನ್ನು ಒಳಗೊಂಡಿದೆ. ಅತ್ಯಂತ ಐಷಾರಾಮಿ ಕೈಗಡಿಯಾರವಾದ ಇದು ಕೆಂಪು ಮಾಣಿಕ್ಯ, ಹಸಿರು ಪಚ್ಚೆಗಳಿಂದ ಅಲಂಕರಿಸಲ್ಪಟ್ಟಿದೆ. ರಿಚರ್ಡ್ ಮಿಲ್ಲೆ ಆರ್ ಎಮ್ 56-01 ಶುದ್ಧ, ಸ್ಫಟಿಕದಂತಹ ನೀಲಮಣಿಯನ್ನು ಹೊಂದಿದೆ. ಇದು ಅಸಾಧಾರಣ ಬಾಳಿಕೆ ಮತ್ತು ಸ್ಕ್ರಾಚ್ ಪ್ರತಿರೋಧವನ್ನು ಹೊಂದಿದೆ. ಇದರ ಅಂದಾಜು ಬೆಲೆ 54 ಕೋಟಿ ರೂ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA