ಸರಗೂರು: ಪಟ್ಟಣದ 4 ನೇ ವಾರ್ಡಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ನಡೆಸಲಾಯಿತು. ವಾರ್ಡ್ ನ ಮನೆ ಮನೆಗಳ ಮುಂದೆ ಹಸಿರು ತೋರಣ, ರಂಗೋಲಿ ಬಿಡಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿರಥೋತ್ಸವ ವಾದ್ಯ., ನಗಾರಿ, ಸ್ವಾಂಡ್ಸ್ ಮೂಲಕ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳು ಕೂಡ ಭಾಗವಹಿಸಿರುವುದು ವಿಶೇಷವಾಗಿತ್ತು.
ಸಭೆಯಲ್ಲಿ ವಾರ್ಡಿನ ಯಜಮಾನರು.ಪಪಂ ಸದಸ್ಯ ಎಸ್ ಎಲ್ ರಾಜಣ್ಣ., ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣ, ಬೀಮಯ್ಯ, ಪ.ಪಂ. ಮಾಜಿ ಸದಸ್ಯ ಬಿಲ್ಲಯ್ಯ, ಬೋಗಪ್ಪ, ಸರಗೂರು ಕೃಷ್ಣ, ಪುಟ್ಟರಾಜು, ಮಧು, ಇಟ್ಪರಾಜಣ್ಣ, ಬಿಡುಗಲು ಶಿವಣ್ಣ, ಕೂಡಿಗಿಗೊವಿಂದರಾಜು, ಶಿವಕುಮಾರ್ ಬಿ ಮಟಕೇರಿ,ಕ ಮಹೇಂದ್ರ ಹೂವಿನಕೊಳ, ಮೋಹನ್ ಲಿಂಗೇನಹಳ್ಳಿ ಇನ್ನೂ ಅಕ್ಕ ಪಕ್ಕದ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


