ಸರಗೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಹೇಳಿದ್ದಾರೆ. ಇಂದಿನ ಪ್ರಪಂಚದಲ್ಲಿ ಶಿಕ್ಷಣ ಎನ್ನುವುದು ಬಹಳ ಮುಖ್ಯವಾಗಿದೆ ಹಾಗಾಗಿ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಬಾಲ್ಯದಿಂದಲೇ ಹೆಚ್ಚಿನ ಒತ್ತು ನೀಡಿ ಎಂದು ಪೋಷಕರಿಗೆ ಅಂಬೇಡ್ಕರ್ ವಿಚಾರವಾದಿ ಪ್ರಕಾಶ್ ಕರೆ ನೀಡಿದರು.
ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ವರ್ಷದ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣಕ್ಕೆ ತಾಯಂದಿರು ಹೆಚ್ಚಿನ ಮಹತ್ವ ನೀಡಬೇಕು. ತಂದೆ, ತಾಯಂದಿರುವ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆಯಿಂದ ಬಿಡಿಸಬೇಡಿ, ಈ ಮೂಲಕ ಮುಂದಿನ ಪೀಳಿಗೆಯನ್ನು ವಿದ್ಯಾವಂತರನ್ನಾಗಿಸಿ ಅವರಿಗೆ ಬಲತುಂಬೋಣ ಎಂದು ಅವರು ಕರೆ ನೀಡಿದರು.
ಅಂತರಸಂತೆ ಸಾರನಾಥ ಬುದ್ಧ ವಿಹಾರ ಬಿಕ್ಕುಣಿ ಗೋತಮಿ ಬಂತೇಜಿ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ವಿವರಿಸಿ, ಸಮಾಜದಲ್ಲಿ ಜನರು ಮುಂದಿನ ಪೀಳಿಗೆಗೆ ಮಾದರಿಯಾಗಿ ಬದುಕುವಂತೆ ಹಾಗೂ ಅವರ ಜವಾಬ್ದಾರಿಗಳನ್ನು ಎಚ್ಚರಿಸಿ, ಮಾರ್ಗದರ್ಶನ ನೀಡಿದರು.
ಹಳೆಯೂರು ಗ್ರಾಮದ ಮಾಜಿ ಗ್ರಾ.ಪಂ. ಸದಸ್ಯ ಚಿನ್ನಯ್ಯರವರು ಅಧ್ಯಕ್ಷತೆ ವಹಿಸಿ ಅಂಬೇಡ್ಕರ್ ಅವರ ಮಾರ್ಗದರ್ಶನವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಗ್ರಾ.ಪಂ. ಸದಸ್ಯ ನಾಗಣ್ಣ, ಗ್ರಾಮದ ದೊಡ್ಡ ಯಜಮಾನರಾದ ಶಿವಮಲ್ಲು, ಚಿಕ್ಕಯಜಮಾನರಾದ ಶಿವು, ಗ್ರಾಮದ ಮುಖಂಡರಾದ ಪುಟ್ಟರಾಜಯ್ಯ, ಅಂಬೇಡ್ಕರ್ ಯುವಕರ ಸಂಘದ ಎಲ್ಲ ಪದಾಧಿಕಾರಿಗಳು, ಸದ್ಯಸ್ಯರುಗಳು ಸೇರಿ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಬುದ್ಧ ವಿಶ್ವ ಹಾಗೂ AVSSನ ಕಾರ್ಯದರ್ಶಿಯಾದ ಮೂರ್ತಿ, ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700