ಡಾ.ಬಿ.ಆರ್. ಅಂಬೇಡ್ಕರ್ ಯಾವುದೇ ಒಂದು ಸಮುದಾಯಕ್ಕೆ ಸಂವಿಧಾನ ರಚನೆ ಮಾಡಿಲ್ಲ. ಎಲ್ಲಾ ಸಮುದಾಯದವರ ಏಳಿಗೆಗೆ ದುಡಿದ ಮಹಾನಾಯಕ, ಸಮಾನತೆಯ ಸಂದೇಶದ ಸಂವಿಧಾನ ನಿರ್ಮಿಸಿದ ಕಾರಣಕ್ಕೆ ಡಾ.ಅಂಬೇಡ್ಕರ್ ಇಡೀ ಜಾಗತಿಕ ಮಟ್ಟದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಂಸದರು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿಳಿಸಿದರು.
ತಾಲ್ಲೂಕಿನ ಕಳಸೂರು ಗ್ರಾಮದಲ್ಲಿ ಗುರುವಾರ ರಂದು ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಪುತ್ಥಳಿ ಹಾಗೂ ಭವನ ಅನಾವರಣಗೊಳಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯ ಬದುಕು ಸಾಗಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಅವರು ಯಾವುದೇ ಒಂದು ಸಮುದಾಯಕ್ಕೆ ಸಂವಿಧಾನ ರಚನೆ ಮಾಡಿಲ್ಲ. ಎಲ್ಲಾ ಸಮುದಾಯದವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮೀಸಲಾತಿಯಲ್ಲಿ ಅನುಕೂಲ ಕಲ್ಪಿಸುವಂತೆ ರಚನೆ ಮಾಡಿದ್ದಾರೆ ಡಾ ಬಿ ಆರ್ ಅಂಬೇಡ್ಕರ್ ಮಹಾನ್ ವ್ಯಕ್ತಿ ಎಂದರು.
ಸಂವಿಧಾನಾತ್ಮಕ ಮಾರ್ಗಗಳ ಹಾದಿಯಲ್ಲಿ ಹೆಜ್ಜೆ ಹಾಕಿದಾಗಲೇ ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳ ಸಾಧನೆ ಸಾಧ್ಯ’ ಎನ್ನುವಂತಹ ಅನೇಕ ಮಹತ್ತರ ಸಮಾಜಮುಖಿ ಆಶಯಗಳನ್ನು ನಾಡಿನ ಜನರೆದೆಯಲ್ಲಿ ಬಿತ್ತಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೀ ವ್ಯಕ್ತಿಯಲ್ಲ, ಒಂದು ಶಕ್ತಿ. ಅನೇಕ ರಾಷ್ಟ್ರಗಳ ಕಾನೂನು ಅಧ್ಯಯನ ನಡೆಸಿ ಸಮಾನತೆಯ ಸಂದೇಶದ ಸಂವಿಧಾನ ನಿರ್ಮಿಸಿದ ಕಾರಣಕ್ಕೆ ಡಾ.ಅಂಬೇಡ್ಕರ್ ಇಡೀ ಜಾಗತಿಕ ಮಟ್ಟದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದ್ದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾಗಬೇಕಾದರೆ ಸಂವಿಧಾನದ ಮೀಸಲಾತಿಯಿಂದ ಸಾಧ್ಯವಾಯಿತು ಎಂದರು.
ಅಂಬೇಡ್ಕರ್ ಅವರ ಪುತ್ಥಳಿಗಳನ್ನು ಕೇವಲ ದಲಿತ ಸಮುದಾಯದಲ್ಲಿ ಮಾತ್ರ ನಿರ್ಮಾಣ ಮಾಡುತ್ತಿರುವುದು ಶೋಚನೀಯ ಸಂಗತಿ. ಎಲ್ಲಾ ಸಮುದಾಯಗಳು ಜೀವನ ಸಾಗಿಸುವಂತಹ ಸ್ಥಳಗಳಲ್ಲಿ ಪುತ್ಥಳಿಯನ್ನು ಎಲ್ಲಾ ಸಮುದಾಯದವರು ಒಗ್ಗೂಡಿ ನಿರ್ಮಾಣ ಮಾಡಬೇಕು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಹೆಚ್.ಸಿ.ನರಸಿಂಹಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಿ ರವಿ, ಜೆಡಿಎಸ್ ಮುಖಂಡ ಜಯಪ್ರಕಾಶ್, ಸಂಶೋಧಕ ಸಂಘದ ರಾಜ್ಯಾಧ್ಯಕ್ಷ ಎಸ್.ಮರಿದೇವಯ್ಯ ಮಾತನಾಡಿದರು.
ಅಂಬೇಡ್ಕರ್ ಸಂಘದ ಅಧ್ಯಕ್ಷ ಸೋಮೇಶ್, ಉಪಾಧ್ಯಕ್ಷ ಆರ್ಕೆಸ್ಟ್ರಾ ರಾಜು, ಕಾರ್ಯದರ್ಶಿ ಬಸವರಾಜು, ಖಜಾಂಚಿ ಬೀರಯ್ಯ, ಡಾ ಚಂದ್ರಶೇಖರ್ ಸಂಶೋಧಕರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಚಿಕ್ಕವೀರ ನಾಯಕ, ಭಾಗ್ಯಲಕ್ಷ್ಮಿ,ಗ್ರಾಪಂ ಸದಸ್ಯರು ಭಾಗ್ಯ ಕೆಂಪಸಿದ್ದ, ಸೋಮಣ್ಣ, ನಂಜಯ್ಯ, ಉಯ್ಯಂಬಳ್ಳಿ ನಾಗರಾಜು, ಶಂಭು, ಕಾಳಸ್ವಾಮಿ, ರಾಜನಾಯಕ, ಟೊಕನ್ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ನಾಗರಾಜು, ರವಿಮೊಸರಹಳ್ಳ, ಮೈಮೀಲ್ ನಿರ್ದೇಶಕ ಈರೇಗೌಡ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪಕೊಟೆ, ಸಮಾಜ ಸೇವಕಿ ಗಿರೀಜಾಂಭದೊರೆಸ್ವಾಮಿ, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಯಾಜ್ ಪಾಷಾ, ಗ್ರಾಪಂ ಸದಸ್ಯ ಕಳಸ್ವಾಮಿ, ಕಲಾವತಿ ಮಂಜುನಾಥ, ಎಲ್ಲಾ ಸಮಾಜದ ಯಜಮಾನರು ದೊಡ್ಡ ಕೂಸಪ್ಪ, ದೊಡ್ಡೆಗೌಡರು, ಗೋಪಾಲಯ್ಯ, ಚೆಲುವರಾಜು, ಕಾಳಯ್ಯ, ಕರಿಯಪ್ಪಶೆಟ್ಟಿ, ನಾಗೇಗೌಡರು ಬಸವರಾಜು, ಮಲ್ಲಿಗಮ್ಮಕಾಳಯ್ಯ, ಮಲ್ಲೇಶ್, ಮಹೇಶ್, ದಿನ್ಯಕುಮಾರ್ , ಮಾಜಿ ಸದಸ್ಯರು ಬೀರೇಗೌಡ, ವೇಣುಗೋಪಾಲ್, ಸೂರ್ಯಕುಮಾರ್, ಚಲ್ಲಯ್ಯ ಭಾಗ್ಯಮ್ಮ, ಗೋಪಾಲಯ್ಯ, ಮಾಕೇಗೌಡರು, ಚಿಕ್ಕಣ್ಣ, ಶೇಷಣ್ಣ, ಎಸ್ಡಿಎಂಸಿ ಅಧ್ಯಕ್ಷ ಕರಿಯಯ್ಯ, ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


