ಸರಗೂರು: ತಮ್ಮನ್ನು ಶೋಷಣೆ, ದೌರ್ಜನ್ಯ ಮಾಡಿದ ಸಮಾಜದ ವಿರುದ್ಧ ಅಂಬೇಡ್ಕರ್ ಎಂದಿಗೂ ಪ್ರತಿಕಾರದಿಂದ ಸಿಡಿದು ನಿಂತವರಲ್ಲ. ಪ್ರತಿಯೊಬ್ಬರೂ ಸಹೋದರತ್ವದಿಂದ ಬದುಕಬೇಕು ಎಂದು ಕನಸು ಕಂಡವರು ಎಂದು ಪಶು ಸಂಗೋಪನೆ ಇಲಾಖೆಯ ಸಹಯಕ ನಿರ್ದೇಶಕ ಡಾ.ವೈ.ಡಿ.ರಾಜಣ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯ ಸಹಯೋಗದೊಂದಿಗೆ ನಡೆದ ಡಾ.ಬಿ.ಆರ್.ಅಂಬೇಡ್ಕರ್ 131ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ರವರು ಶೋಷಿತ ಸಮುದಾಯಗಳ ಏಳಿಗೆಗಾಗಿ ನಿರಂತವಾಗಿ ಶ್ರಮಿಸಿ ಚಳುವಳಿಗಳನ್ನು ಮಾಡಿದವರು. ಜಾಗೃತಿ ಮತ್ತು ಜ್ಞಾನದ ದೀಪವಾಗಿ ಈ ದೇಶದ ಅಭಿವೃದ್ಧಿಗೆ ದಾರಿಯಾದವರು. ಅಂತಹ ಮಹನೀಯರು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ ಅವರು ದೇಶದ ಆಸ್ತಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳು ಸಾಮಾನ್ಯ ಜನರಿಗೆ, ರೈತಪಿ ವರ್ಗದವರಿಗೆ ತಲುಪುದಾದರು ಹೇಗೆ? ಕಾರ್ಯಕ್ರಮದಲ್ಲಿ ಕೇವಲ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾತ್ರ ಸೀಮಿತವಲ್ಲ. ಇನ್ನೂ ಮುಂದೆಯಾದರು ಅಧಿಕಾರಿಗಳು ಎಲ್ಲರ ಸಹಕಾರ ಪಡೆದು ಉತ್ತಮ ರೀತಿಯಲ್ಲಿ ಮಹನೀಯರ ಜಯಂತಿಗಳನ್ನು ಆಚರಿಸಬೇಕು ಎಂದರು.
ರಾಜ್ಯಶಾಸ್ತ್ರದ ಉಪನ್ಯಾಸಕ ಮಹದೇವಸ್ವಾಮಿ ಮಾತನಾಡಿ, ಅಂಬೇಡ್ಕರ್ ರವರ ಜೀವನ ಚರಿತ್ರೆ, ಎದುರಿಸಿದ ಸಂಕಷ್ಟಗಳು, ದಲಿತರ ಅಭಿವೃದ್ಧಿಗಾಗಿ ಪಟ್ಟ ಶ್ರಮ ಮತ್ತು ಹೋರಾಟಗಳು ಹಾಗೂ ಭಾರತಕ್ಕೆ ಅವರು ನೀಡಿದ ಕೊಡುಗೆಗಳ ಕುರಿತಂತೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸದಸ್ಯರಾದ ಚಲುವಕೃಷ್ಣ, ಶ್ರೀನಿವಾಸ್, ಎಸ್.ಎಲ್.ರಾಜಣ್ಣ, ಚೈತ್ರಸ್ವಾಮಿ, ಸಣ್ಣತಾಯಮ್ಮ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಮುಖ್ಯಾಧಿಕಾರಿ ಬಿ.ಜಿ.ಸತೀಶ್, ಮುಖಂಡರಾದ ಶಂಭುಲಿಂಗನಾಯಕ, ಇಟ್ನಾ ರಾಜಣ್ಣ, ಗ್ರಾಮೀಣಾ ಮಹೇಶ್, ಕೊತ್ತೇಗಾಲ ತಿಮ್ಮಯ್ಯ, ಕೂರ್ಣೇಗಾಲ ಬೆಟ್ಟಸ್ವಾಮಿ, ಭೋಗಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗೋಪಾಲಸ್ವಾಮಿ,ಸರಗೂರು ಕೃಷ್ಣ. ವೃತ್ತ ನಿರೀಕ್ಷಕ ಆನಂದ್, ಪಿಎಸ್‍ಐ ಶ್ರವಣ್‍ದಾಸ್ ರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ವಸಂತ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಸ್ವಾಮಿ ಮುಂತಾದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


