ತುಮಕೂರು: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆಯನ್ನು ಖಂಡಿಸಿ ಹತ್ಯೆಯಾದ ನೊಂದ ಜೀವಕ್ಕೆ ಶಾಂತಿ ಸಿಗಲೆಂದು ಹಾಗೂ ಆಕೆಯನ್ನು ಹತ್ಯೆ ಮಾಡಿದ ಆಕೆಯ ಹೆತ್ತ ತಂದೆಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಇಂದು ತುಮಕೂರು ಜಿಲ್ಲಾ ಅಂಬೇಡ್ಕರ್ ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿ ಪತ್ರವನ್ನು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಅಂಬೇಡ್ಕರ್ ಸೇನೆಯ ತುಮಕೂರು ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ. ಸುಮಾ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 78 ವರ್ಷಗಳು ಕಳೆದರೂ ಸಹ ಜಾತಿ ಎಂಬ ಪಿಡುಗು ಇನ್ನೂ ಜೀವಂತವಾಗಿಯೇ ಉಳಿದಿದೆ, ನಮ್ಮ ದೇಶದ ಕಾನೂನಿಗೆ ಶಕ್ತಿ ಕುಂದಿದೆಯಾ ಎಂಬ ಅನುಮಾನಗಳು ಬರುತ್ತಿವೆ, ಏಕೆಂದರೆ ಜನ್ಮ ಕೊಟ್ಟ ತಂದೆಯೇ 7 ತಿಂಗಳ ಗರ್ಭಿಣಿ ಎಂಬುದನ್ನೂ ಸಹ ನೋಡದೇ ಕೇವಲ ತಮ್ಮ ಮರ್ಯಾದೆಗೋಸ್ಕರ ತಾನೇ ಜನ್ಮ ಕೊಟ್ಟ ಮಗಳನ್ನು ಕೊಂದಿರುವುದು ಅಮಾನವೀಯ ಎಂದರು
ಮನವಿ ಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ತುಮಕೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಕೆ. ಸುಮಾ, ಸಿ. ಪಿ. ಶಿವಲಿಂಗಪ್ಪ, ಸಿ. ಪಿ. ಶೋಭಾ, ಮಂಜಮ್ಮ, ಅಂಬೇಡ್ಕರ್ ಸ್ವಾಭಿಮಾನಿ ಜನಸೇನೆ ರಾಜ್ಯಾದ್ಯಕ್ಷರಾದ ಎನ್. ಕುಮಾರ್, ಮುಖಂಡರುಗಳಾದ ರಾಜಶೇಖರಯ್ಯ, ಜಯಣ್ಣ, ಮಂಜುಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


