nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ: 30 ಲಕ್ಷ ಮೌಲ್ಯದ ಚಿನ್ನಾಭರಣಕ್ಕಾಗಿ ಕೊಲೆ ಶಂಕೆ!?

    February 14, 2026

    ಹಾವೇರಿಯಲ್ಲಿ ಕಾಂಗ್ರೆಸ್‌ ನದ್ದು ‘ಭ್ರಷ್ಟಾಚಾರದ ಸಾಧನೆಯ ಸಮಾವೇಶ’: ಬಸವರಾಜ ಬೊಮ್ಮಾಯಿ ವ್ಯಂಗ್ಯ

    February 14, 2026

    ಬಾವಿಗೆ ಬಿದ್ದ ಚಿರತೆ: ಗಂಟೆಗಟ್ಟಲೆ ಕಾದರೂ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆ!

    February 14, 2026
    Facebook Twitter Instagram
    ಟ್ರೆಂಡಿಂಗ್
    • ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ: 30 ಲಕ್ಷ ಮೌಲ್ಯದ ಚಿನ್ನಾಭರಣಕ್ಕಾಗಿ ಕೊಲೆ ಶಂಕೆ!?
    • ಹಾವೇರಿಯಲ್ಲಿ ಕಾಂಗ್ರೆಸ್‌ ನದ್ದು ‘ಭ್ರಷ್ಟಾಚಾರದ ಸಾಧನೆಯ ಸಮಾವೇಶ’: ಬಸವರಾಜ ಬೊಮ್ಮಾಯಿ ವ್ಯಂಗ್ಯ
    • ಬಾವಿಗೆ ಬಿದ್ದ ಚಿರತೆ: ಗಂಟೆಗಟ್ಟಲೆ ಕಾದರೂ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆ!
    • ಅದೃಷ್ಟ ಒಲಿದು ಬಂದಾಗ
    • ತುರುವೇಕೆರೆ: ಮೈತ್ರಿ ಟಿಕೆಟ್ ಗಾಗಿ ಜಟಾಪಟಿ | ಕೃಷ್ಣಪ್ಪ, ಚಂದ್ರೇಶ್ ಪೈಪೋಟಿ ನಡುವೆಯೇ ಮಸಾಲ ಜಯರಾಮ್ ಅಖಾಡಕ್ಕೆ!
    • ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!
    • ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ
    • ಇ–ಪೌತಿ ಯೋಜನೆ: ಜನಪರ ಕೆಲಸ ಮಾಡಿದ  ತಹಶೀಲ್ದಾರ್ ಕುಂಞಿ ಅಹಮದ್, ಎಡಿಎಲ್‌ಆರ್ ಜಗದೀಶ್ ಅವರಿಗೆ ಅಭಿನಂದನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾಷಾ ಸ್ವಾಯತ್ತತೆಗೆ ಅಂಬೇಡ್ಕರ್‌ ಕೊಡುಗೆ ಅಪಾರ: ಮಂಜುನಾಥ್‌ ಹೆತ್ತೇನಹಳ್ಳಿ
    ತುಮಕೂರು December 2, 2024

    ಭಾಷಾ ಸ್ವಾಯತ್ತತೆಗೆ ಅಂಬೇಡ್ಕರ್‌ ಕೊಡುಗೆ ಅಪಾರ: ಮಂಜುನಾಥ್‌ ಹೆತ್ತೇನಹಳ್ಳಿ

    By adminDecember 2, 2024No Comments2 Mins Read
    kannadarajyothsava

    ಹೆಬ್ಬೂರು: ಕನ್ನಡಕ್ಕೂ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಗೆ ಒಂದು ನಂಟಿದೆ ಎಂದು ಮುಖಂಡರು ಹಾಗೂ ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ಮಂಜುನಾಥ್ ಹೆತ್ತೇನಹಳ್ಳಿ ತಿಳಿಸಿದರು.

    ಹೋಬಳಿಯ ಅಂಬೇಡ್ಕರ್ ಆಟೋ ಚಾಲಕರ ಸಂಘದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷಾವಾರು ಪ್ರಾಂತ್ಯಗಳ ಸ್ವಾಯತ್ತತೆ ಬಗ್ಗೆ ಅಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಮಾತನಾಡಿದ್ದರು. ಇಲ್ಲದಿದ್ದರೆ ಇಂತಹ ಹೆಮ್ಮೆಯ ಕರುನಾಡನ್ನು ಕಟ್ಟಿಕೊಳ್ಳಲು ನಮಗೆ ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.


    Provided by
    Provided by

    ಭಾರತ ಆಚಾರ, ವಿಚಾರ ಹಾಗೂ ಭಾಷೆಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶವೆಂದು ಅಂಬೇಡ್ಕರ್ ಅವರಿಗೆ ತಿಳಿದಿತ್ತು. ಇಂತಹ ವೈವಿಧ್ಯಮಯ ದೇಶ ಸಂವಿಧಾನದ ಮೂಲಕ ಮಾತ್ರವೇ ಏಕತೆ ಸಾಧಿಸಲು ಸಾಧ್ಯ ಎಂದು ಅವರಿಗೆ ತಿಳಿದಿತ್ತು ಎಂದು ಹೇಳಿದರು.

    ನಮ್ಮ ದೇಶವನ್ನು ಹೊರತು ಪಡಿಸಿ ಇಡೀ ಪ್ರಪಂಚ ಬಾಬಾ ಸಾಹೇಬರನ್ನು ನೋಡಿದ್ದು ಜ್ಞಾನದ ದೃಷ್ಟಿಯಿಂದ ಮಾತ್ರ. ಬಾಬಾ ಸಾಹೇಬರ ವಿವೇಚನೆಗೆ ಬರದಂತಹ ಯಾವ ವಿಷಯಗಳೂ ಈ ಪ್ರಪಂಚದಲ್ಲಿ ಇಲ್ಲ. ವರ್ಷದ 365 ದಿನಗಳು ಹಾಗೂ ದಿನದ 24 ಗಂಟೆಯೂ ಒಬ್ಬ ವ್ಯಕ್ತಿ ಬಗ್ಗೆ ನಿರಂತರ ಸಂಶೋಧನೆಗಳು ನಡೆಯುತ್ತಿದ್ದರೆ ಅದು ಡಾ.ಬಾಬಾ ಸಾಹೇಬ್ ಅವರ ಬಗ್ಗೆ ಮಾತ್ರ. ಇತಿಹಾಸ, ಅರ್ಥಶಾಸ್ತ್ರ, ಕಾನೂನುಶಾಸ್ತ್ರ ಹೀಗೆ ಎಲ್ಲ ವಿಷಯಗಳನ್ನು ಅಧ್ಯಯನ ಮಾಡಬೇಕೆಂದರೆ ಅಂಬೇಡ್ಕರ್ ಅವರನ್ನು ಓದಬೇಕು ಎಂದು ಸಲಹೆ ನೀಡಿದರು.

    ಕನ್ನಡ ಎಂಬ ಭಾಷೆಯೇ ಸುಂದರ. ನಮ್ಮ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಈಗ ಕನ್ನಡದ ಕುರಿತಾಗಿ ದೊರೆತಿರುವ ತಾಳುಗುಂದ ಶಾಸನವು ಹಲ್ಮಿಡಿ ಶಾಸನಕ್ಕೂ ಹಿಂದಿನ ಇನ್ನೂರು ವರ್ಷದ ಇತಿಹಾಸವನ್ನು ಹೇಳಲಿದೆ ಎಂದು ಭಾವಿಸುತ್ತೇನೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ ಎಂಬುದು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಾರುತ್ತದೆ. ಮೂರನೇ ಶಾಸ್ತ್ರೀಯ ಸ್ಥಾನಮಾನವನ್ನೂ ಪಡೆದಿರುವ ಭಾಷೆ ಎಂದರೆ ಅದು ಕನ್ನಡ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಕನ್ನಡ ಎಂದರೆ ರೋಮಾಂಚನ. ಕವಿ ಪುಂಗವರ ಪ್ರಕಾರ ಬಹುತೇಕ ದಕ್ಷಿಣ ಭಾರತನ್ನು ಕನ್ನಡ ನಾಡು ಎಂದು ಕರೆಯಲಾಗುತ್ತಿತ್ತು. ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡದ ಏಕೀಕರಣ ಶುರುವಾಯಿತು. ಅವರೊಂದಿಗೆ ಹಲವಾರು ಮಹನೀಯರು ತಮ್ಮ ತನು, ಮನ, ಧನ ಅರ್ಪಿಸಿ ನಮಗೆ ಸುಂದರವಾದ ಕನ್ನಡ ದೇಶವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಇತಿಹಾಸ ನೆನಪಿಸಿಕೊಂಡರು.

    ಈ ಸಂದರ್ಭದಲ್ಲಿ ಕರ್ನಾಟಕ ಕೃಷಿಕ್ ಸಮಾಜ ಕಾರ್ಯಾಧ್ಯಕ್ಷರು, ಚಿಕ್ಕಣ್ಣ ಸ್ವಾಮಿ ಧರ್ಮದರ್ಶಿಗಳು ಪೂಜ್ಯ ಪಾಪಣ್ಣ, ಕೆಂಪಮ್ಮ ದೇವಿಯ ಪ್ರಧಾನ ಅರ್ಚಕ ಹಾಗೂ ತಾಪಂ ಮಜಿ ಸದಸ್ಯರಾದ, ಕೆಂಪ ಹನುಮಣ್ಣ, ಮುಖಂಡರಾದ ಕೆ.ಬಿ.ರಾಜಣ್ಣ, ರಂಗಣ್ಣ, ಕೃಷ್ಣ, ದೇವರಾಜ್, ಶಂಕರ್, ಚಿಕ್ಕಣ್ಣ, ನರಸಪ್ಪ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಗಿರೀಶ್ ಹಾಗೂ ಮಲ್ಲೇಶ್, ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!

    February 14, 2026

    ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ

    February 14, 2026

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ: 30 ಲಕ್ಷ ಮೌಲ್ಯದ ಚಿನ್ನಾಭರಣಕ್ಕಾಗಿ ಕೊಲೆ ಶಂಕೆ!?

    February 14, 2026

    ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಮದುವೆ ಸಮಾರಂಭಕ್ಕೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆಯ…

    ಹಾವೇರಿಯಲ್ಲಿ ಕಾಂಗ್ರೆಸ್‌ ನದ್ದು ‘ಭ್ರಷ್ಟಾಚಾರದ ಸಾಧನೆಯ ಸಮಾವೇಶ’: ಬಸವರಾಜ ಬೊಮ್ಮಾಯಿ ವ್ಯಂಗ್ಯ

    February 14, 2026

    ಬಾವಿಗೆ ಬಿದ್ದ ಚಿರತೆ: ಗಂಟೆಗಟ್ಟಲೆ ಕಾದರೂ ಅರಣ್ಯ ಇಲಾಖೆ ಅಧಿಕಾರಿಗಳು ನಾಪತ್ತೆ!

    February 14, 2026

    ಅದೃಷ್ಟ ಒಲಿದು ಬಂದಾಗ

    February 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.