ಕೊರಟಗೆರೆ: ಪಟ್ಟಣ ಪಂಚಾಯಿತಿ ಮುಂಭಾಗ ಬಾಬಾ ಸಾಹೇಬ್ ಅಂಬೇಡ್ಕರ್ ಮಹಾ ಪರಿ ನಿರ್ವಾಣ ಕಾರ್ಯಕ್ರಮವನ್ನು ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ರ ಬಗ್ಗೆ ಅರಿವು ಹಾಗೂ ಅಸ್ಪೃಶ್ಯತೆ ಅರಿವು ಟ್ಯಾಬ್ಲ್ಯೂ ಮೂಲಕ ಜಿಲ್ಲಾದ್ಯಂತ ಎಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜೆಟ್ಟಿ ಅಗ್ರಹಾರ ನಾಗರಾಜು ವಿಡಿಯೋ ಪ್ರದರ್ಶನ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಲವು ಕಲಾ ತಂಡ ಬಾಬಾ ಸಾಹೇಬರ ಕ್ರಾಂತಿ ಗೀತೆಗಳು ಹಾಡಿ ಅಂಬೇಡ್ಕರರನ್ನು ಸ್ಮರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಾತನಾಡಿ, ಈ ದಿನ ನಾವೆಲ್ಲರೂ ಬಾಬಾ ಸಾಹೇಬರನ್ನ ಸ್ಮರಿಸಲೇಬೇಕು. ಅವರು ನೋವು ಅನುಭವಿಸಿ ನಮ್ಮೆಲ್ಲರನ್ನ ಇಂದು ಸ್ವತಂತ್ರವಾಗಿರಿಸಿದ್ದಾರೆ. ನಾವುಗಳು ಈಗಲೂ ಒಂದು ಡಿಗ್ರಿ ಮಾಡುವುದೇ ಕಷ್ಟ ಬಾಬಾ ಸಾಹೇಬರು ಆ ಕಾಲದಲ್ಲಿ ಯಾವುದೇ ಸೌಲಭ್ಯವಿಲ್ಲದ ಸಮಯದಲ್ಲಿ 33 ಡಿಗ್ರಿ ಮಾಡಿ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಹೆಮ್ಮೆಯ ಸಂವಿಧಾನ ನೀಡಿದ್ದಾರೆ. ಹಿಂದೆ ಬಾಬಾ ಸಾಹೇಬರು ಕೂಡ ಹಲವು ಅವಮಾನ ಅಪಮಾನ ಎದುರಿಸಿದ್ದಾರೆ. ಎಲ್ಲವನ್ನು ಅಧ್ಯಯನ ಮಾಡಿ ಸರ್ವಧರ್ಮಕ್ಕೂ ಸರ್ವ ಜನಾಂಗಗಳಿಗೂ ಮೀಸಲಾತಿ ಹಾಗೂ ವಿಶ್ವದ ಅತ್ಯುತ್ತಮವಾದ ಸಂವಿಧಾನ ನೀಡಿದ್ದಾರೆ ಎಂದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಬಾಬಾ ಸಾಹೇಬರ ಕಾರ್ಯಕ್ರಮ ಎಲ್ಲಾ ದಲಿತಪರ ಸಂಘಟನೆಗಳು ಆಯೋಜನೆ ಮಾಡಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ. ಆದರೆ ಇಂದು ನಾವೆಲ್ಲರೂ ದುಃಖಪಡುವ ದಿನವಾಗಿದೆ ಬಾಬಾ ಸಾಹೇಬರು ತನ್ನ ಮಗನ ಸಾವಿಗೂ ಭಾಗವಹಿಸಲು ಆಗದ ಪರಿಸ್ಥಿತಿ, ಇಂತಹ ಎಷ್ಟೋ ತ್ಯಾಗಗಳನ್ನ ನಮ್ಮ ದೇಶಕ್ಕೆ ಸಂವಿಧಾನ ಬರೆಯುವ ಸಮಯದಲ್ಲಿ ಮಾಡಿದ್ದಾರೆ. ಇಂಥ ವಿಚಾರಗಳನ್ನು ಮೂಲಕ ಜೆಟ್ಟಿ ಅಗ್ರಹಾರ ನಾಗರಾಜು ಜಿಲ್ಲಾದ್ಯಂತ ಎಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವಜನಾಂಗಕ್ಕೆ ಟ್ಯಾಬ್ಲೋ ಮೂಲಕ ಅಂಬೇಡ್ಕರ್ ವಿಡಿಯೋ ಪ್ರದರ್ಶನ ಮಾಡುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್, ದಲಿತ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು, ದಲಿತ ಸಂರಕ್ಷಣಾ ಸಮಿತಿ ತಾಲೂಕು ಸಂಚಾಲಕರಾದ ಕಾಮ ರಾಜನಹಳ್ಳಿ ದೊಡ್ಡಯ್ಯ, ಕಲಾವಿದರಾದ ದಾಸರಹಳ್ಳಿ ಮಂಜುನಾಥ್, ಶಿವರಾಂ, ಗಂಗಣ್ಣ, ವಕೀಲರಾದ ನಾಗರಾಜು, ವಡ್ಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಖ್ಯಾತಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಆಟೋ ರವಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx