ನಟ ದರ್ಶನ್ ಇನ್ ಸ್ಟಾಗ್ರಾಮ್ ನಲ್ಲಿ ಸುಮಲತಾ ಸೇರಿದಂತೆ ಕೆಲವೇ ಕೆಲವರನ್ನು ಫಾಲೋ ಮಾಡುತ್ತಿದ್ದರು. ಈ ಪೈಕಿ ಅಂಬರೀಷ್ ಕುಟುಂಬದ ಸುಮಲತಾ, ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಇದ್ದರು. ಎಲ್ಲರನ್ನೂ ದರ್ಶನ್ ಅನ್ ಫಾಲೋ ಮಾಡಿದ್ದರು, ಇದೀಗ ಸುಮಲತಾ ಮನೆಯ ಪ್ರಮುಖ ಕಾರ್ಯಕ್ರಮಕ್ಕೆ ದರ್ಶನ್ ಗೈರಾಗಿದ್ದಾರೆ.
ಅಭಿಷೇಕ್ ಅಂಬರೀಷ್ ಮಗನಿಗೆ ನಾಮಕರಣ ಶಾಸ್ತ್ರ. ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ಶಾಸ್ತ್ರ ನೆರವೇರಿತು. ಈ ಕಾರ್ಯಕ್ರಮಕ್ಕೆ ಸುದೀಪ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಆದರೆ ದರ್ಶನ್ ಮಾತ್ರ ಗೈರಾಗಿದ್ದರು.
ಯಮ ಕರೆದರೆ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಬರ್ತೀನಿ ಎಂದು ಹೇಳುತ್ತೇನೆ ಎಂದು ಒಂದು ಕಾಲದಲ್ಲಿ ನಟ ದರ್ಶನ್ ಹೇಳಿದ್ದರು. ಆದರೆ ತಾನು ಜೈಲು ಸೇರಿದ ವೇಳೆ ಯಾರೂ ಬೆನ್ನ ಹಿಂದೆ ನಿಲ್ಲಲಿಲ್ಲ ಎಂದು ಅವರು ನೊಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4