ಶ್ರೀನಗರ: ರಾಷ್ಟ್ರದಲ್ಲಿ ಭದ್ರತಾ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ಹೇಳುತ್ತಿದ್ದು ಇದು ನಿಜವಾಗಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕಗೆ ನಡೆದುಕೊಂಡು ಬರಲಿ ನೋಡೋಣ ಎಂದು ರಾಹುಲ್ ಗಾಂಧಿ ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಭಾರತ ಜೋಡೊ ಯಾತ್ರೆಯು ಕೊನೆಯ ಹಂತ ತಲುಪಿದ್ದು ಕನ್ಯಾಕುಮಾರಿಯಿಂದ ಲಾಲ್ ಚೌಕ್ ತಲುಪಿದ ರಾಹುಲ್ ಗಾಂಧಿ ಅವರು ಮಾತನಾಡಿ ದೇಶದಲ್ಲಿ ಭದ್ರತೆ ಪರಿಣಾಮಕಾರಿಯಾಗಿ ಇಲ್ಲ ಎಂದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿತ್ ಶಾ ದೇಶದಲ್ಲಿ ಎಲ್ಲವು ಚೆನ್ನಾಗಿದೆ ಎಂದು ಹೆಳುತ್ತಾರೆ ಹಾಗಿದ್ದರೆ ಲಾಲ್ ಚೌಕವರೆಗೂ ಅವರು ನಡೆದು ತೋರಿಸಲಿ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ಸಾಮಾನ್ಯ ಘಟನೆಯಾಗಿದೆ ಎಂದಿದ್ದಾರೆ.ಇತ್ತೀಚೆಗೆ ಭದ್ರತಾ ಲೋಪದಿಂದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಪೊಲೀಸರು ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ತಿಳಿಸಿದರೆ, ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರದು ಆಧಾರರಹಿತ ಹೇಳಿಕೆ ಎಂದು ಆರೋಪಿಸಿ ಗೇಲಿ ಮಾಡಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


