ಕ್ರಿಕೆಟ್ ಆಡುವಾಗ ನೋ ಬಾಲ್ ಕರೆದಿದ್ದಕ್ಕೆ ಅಂಪೈರ್‌ಗೆ ಚಾಕುವಿನಿಂದ ಇರಿದ ಘಟನೆ ಒಡಿಶಾದ ಕಟಕ್ ನಲ್ಲಿ ಭಾನುವಾರ ನಡೆದಿದೆ.
ಕ್ರಿಕೆಟ್ ಆಡುವಾಗ ಲಕ್ಕಿ ರಾವತ್ ಅವರು ನೋ ಬಾಲ್ ಎಂದು ಬಾಲ್ ಎಸೆದರು. ಈ ವೇಳೆ ವಾಗ್ವಾದ ನಡೆದು ಸ್ಮೃತಿ ರಂಜನ್ ರಾವತ್ ಲಕ್ಕಿಗೆ ಚಾಕುವಿನಿಂದ ಇರಿದಿದ್ದಾರೆ. ಲಕ್ಕಿ ರಾವತ್ ಸ್ಥಳದಲ್ಲೇ ಇರಿದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆ ಬಳಿಕ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬ್ರಹ್ಮಪುರ ಮತ್ತು ಶಂಕರಪುರ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯ ವೇಳೆ ಈ ಘಟನೆ ನಡೆದಿದೆ. ಇದೇ ವೇಳೆ ಲಕ್ಕಿ ಸಾವಿನ ನಂತರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA