ಸರಗೂರು: ಇತ್ತೀಚೆಗೆ ಕಾಡಿನಿಂದ ನಾಡಿಗೆ ಬರುವ ಮೃಗಗಳ ಸಂಖ್ಯೆ ಹೆಚ್ಚುತ್ತಿದೆ. ಸರಗೂರು ತಾಲ್ಲೂಕಿಯಲ್ಲಂತೂ ವಿಪರೀತ ಭಯದ ವಾತಾವರಣ ನಿರ್ಮಾಣವಾಗಿದೆ. ನುಗು ಜಲಾಶಯದ ಹಿನ್ನೀರು ಬಳಿ ಇರುವ ಹೊಸ ಬಿರ್ವಾಳ್ ವಲಯದ ಅರಣ್ಯ ವ್ಯಾಪ್ತಿಯ ಹೊಸಹೆಗ್ಗುಡಿಲು ಗ್ರಾಮದಲ್ಲಿ ಶನಿವಾರದಂದು ಜಮೀನು ಒಂದರಲ್ಲಿ ಹುಲಿ ಹೆಜ್ಜೆಯ ಗುರುತು ಕಾಣಿಸಿಕೊಂಡು ಪ್ರತ್ಯಕ್ಷವಾಗಿ ಆತಂಕ ನಿರ್ಮಿಸಿರುವ ಬೆನ್ನಲ್ಲೇ ಹೊಸಹೆಗ್ಗುಡಿಲು ಗ್ರಾಮದ ಜಮೀನಿನಲ್ಲಿ ಹುಲಿಯೊಂದು ಹೆಜ್ಜೆ ಗುರುತು ಕಾಣಿಸಿಕೊಂಡು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಹೆಡಿಯಾಲ ಮಾರ್ಗವಾಗಿ ಸರಗೂರು ತಾಲ್ಲೂಕಿನಗೆ ಮಧ್ಯೆ ರಸ್ತೆಯ ಬದಿಯಲ್ಲಿ ಇರುವ ಹೊಸಹೆಗ್ಗುಡಿಲು ಗ್ರಾಮದ ಸಿದ್ದರಾಜು ಎಂಬುವರ ಜಮೀನಲ್ಲಿ ಬಿರ್ವಾಳ್ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯೆ ಹುಲಿ ಪ್ರತ್ಯಕ್ಷವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಜಮೀನಲ್ಲಿ ಕಾವಲು ಕಾಯುವ ಸಮಯದಲ್ಲಿ ರೈತರು ಒಬ್ಬರು ದಾಟುತ್ತಿದ್ದ ಹುಲಿಯ ದೃಶ್ಯ ಸೆರೆಯಾಗಿದೆ.
ಈ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಚಿರತೆ ಮತ್ತು ಹುಲಿ ಹಾವಳಿಯಿಂದ ಈಗಾಗಲೇ ಭಯ ಹೆಚ್ಚಿದೆ. ಈಗ ಹುಲಿ ಪ್ರತ್ಯಕ್ಷವಾಗಿ ಆತಂಕವನ್ನ ಇನ್ನಷ್ಟು ಹೆಚ್ಚಿಸಿದೆ. ಒಂದು ಕಡೆ ಚಿರತೆ ಹಾವಳಿ, ಇದೀಗ ಹುಲಿ ಪ್ರತ್ಯಕ್ಷವಾಗಿದೆ. ಈ ಹಿಂದೆ ಬಳ್ಳೂರುಹುಂಡಿ, ಹಾದನೂರು, ಹಾದನೂರುವಡೆಯನಪುರ, ಗ್ರಾಮದ ರೈತರೊಬ್ಬರ ಮೇಲೆ ಹುಲಿ ದಾಳಿ ಮಾಡಿತ್ತು. ತೀವ್ರ ಗಾಯಗೊಂಡಿದ್ದ ಅವರು ಕೆಲಕಾಲ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದಾರೆ.
ಹೆಡಿಯಾಲ ವಲಯದ ಭಾಗದಲ್ಲಿ ಚಿರತೆ, ಹುಲಿ ಹಾವಳಿ ಹೆಚ್ಚಾಗಿದ್ದು, ಗ್ರಾಮದ ಅನೇಕ ರೈತರ ಜಾನುವಾರುಗಳನ್ನ ಬಲಿ ತೆಗೆದುಕೊಳ್ಳುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ, ಹುಲಿಗಳನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ ಈವರೆಗೂ ಬೋನಿಗೆ ಚಿರತೆ, ಹುಲಿ ಸೆರೆ ಸಿಕ್ಕಿಲ್ಲ. ಹೀಗಾಗಿ ಜನ ಸಾಕಷ್ಟು ಭಯಗೊಂಡಿದ್ದಾರೆ. ಕಳೆದ ಒಂದು ಆರು ತಿಂಗಳಿಂದ ಚಿರತೆ, ಹುಲಿ ಕಾಟ ಹೆಚ್ಚಾದರು ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥ ಹೊಸಹೆಗ್ಗುಡಿಲು ಗ್ರಾಮದ ವಾಲ್ಮೀಕಿ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು
ಹೊಸಹೆಗ್ಗುಡಿಲು ಸೇರಿ ಸುತ್ತಮುತ್ತ ಹಳ್ಳಿಗಳಲ್ಲಿ ಸಿಕ್ಕಾಪಟ್ಟೆ ಟೆನ್ಷನ್ ಸೃಷ್ಟಿಯಾಗಿದೆ. ಜನರು ಮನೆಯಿಂದ ಹೊರಬರಲು ಹಾಗೂ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಹುಲಿ ಸೆರೆಗೆ ಆಗ್ರಹ ಮಾಡಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ 2-3 ಬಾರಿ ಹುಲಿ ಕಾಣಿಸಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಳೆದ ತಿಂಗಳು ದನ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಹುಲಿ ಹಠಾತ್ ದಾಳಿ ನಡೆಸಿತ್ತು. ರೈತರ ಎಂಬುವವರ ಮೇಲೆ ಹುಲಿ ಹಠಾತ್ ದಾಳಿ ನಡೆದಿತ್ತು. ಈ ವೇಳೆ ಹತ್ತಿರದಲ್ಲಿದ್ದ ಇತರರು ನೆರವಿಗೆ ಬಂದು ರೈತನನ್ನು ಪ್ರಾಣಾಪಾಯದಿಂದ ಪಾರು ಮಾಡಿದರು. ತೀವ್ರ ಗಾಯಗೊಂಡಿದ್ದ ದಾಸಯ್ಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಪತ್ತೆಗೆ ಗಸ್ತು ತಿರುಗಿದರು. ಇಷ್ಟಾದರು ಹುಲಿಯಾಗಲಿ ಚಿರತೆಯಾಗಲಿ ಸೆರೆ ಸಿಕ್ಕಿಲ್ಲ. ಇಷ್ಟದೇ ಅಲ್ಲದೇ ಹೊಸಹೆಗ್ಗುಡಿಲು ಹಾಗೂ ಬಿರ್ವಾಳ್ ಸುತ್ತಮುತ್ತ ಎಷ್ಟು ಚಿರತೆ ಮತ್ತು ಹುಲಿಗಳು ಸೇರಿಕೊಂಡಿವೆ ಎಂದು ಗ್ರಾಮಸ್ಥರು ಅರಣ್ಯ ಅಧೀಕಾರಿಗಳನ್ನ ಪ್ರಶ್ನೆ ಮಾಡಿದ್ದಾರೆ.ಇದರ ಬಗ್ಗೆ ಎಷ್ಟು ಹೇಳಿದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದರು.ನಂತರ ನುಗು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕಳಿಸಿ ಹುಲಿ ಹೆಜ್ಜೆ ಗುರುತು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.ನುಗು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿವೇಕ್ ಪರಿಶೀಲನೆ ನಡೆಸಿ ಬೋನು ಇಟ್ಟಲು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


